ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಉಚಿತ ಆಯುರ್ವೇದ ಚಿಕಿತ್ಸೆ (ಸುದ್ದಿ ಸಂಕ್ಷೇಪ)

Rashmi Kasaragodu
Updated On : 30 Mar 2013, 11:51 am

ಶಿವಮೊಗ್ಗ: ನಗರದ ಮೆಡಿಕೇರ್ ಹೆಲ್ತ್ ಸೆಂಟರ್ 31 ರಂದು ಬೆ.10.30 ರಿಂದ ಮ.1.30ರವರೆಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಪೈಲ್ಸ್, ಫಿಜರ್, ಪಿಸ್ತುಲಾ, ಗುದರೋಗಗಳಿಗೆ ತಪಾಸಣೆ ಮಾಡಿ ಸಲಹೆ ನೀಡಲಾಗುವುದು ಎಂದು ಸೆಂಟರ್ನ  ಡಾ. ಪ್ರಶಾಂತ್ ಕುಕುಡ ತಿಳಿಸಿದ್ದಾರೆ. ಮಾಹಿತಿಗೆ- 9986466165.
ವಿಶೇಷ ಉಪನ್ಯಾಸ
ಶಿವಮೊಗ್ಗ: ರಾಷ್ಟ್ರೋತ್ಥಾನ ಬಳಗ 30ರಂದು ಸ.6.30ಕ್ಕೆ ಪಂಚವಟಿ ಕಾಲೋನಿಯ ಮಧುಕೃಪಾದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಸತ್ಯ ಮತ್ತು ವಿಥ್ಯೆಗಳು ಹಾಗೂ ಇತಿಹಾಸದಲ್ಲಿ ರಜಪೂತರ ಪಾತ್ರ ವಿಷಯ ಕುರಿತಂತೆ ನವ ದೆಹಲಿಯ ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಲಮುಕುಂದ ಪಾಂಡೆ ಉಪನ್ಯಾಸ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಸುಧೀಂದ್ರ ವಹಿಸಲಿದ್ದಾರೆ. ಆಸಕ್ತರು ಪಾಲ್ಗೊಳ್ಳಬಹುದು ಎಂದು ಬಳಗದ ಸಂಚಾಲಕ ಸುರೇಶ್ ತಿಳಿಸಿದ್ದಾರೆ.
ಮುಷ್ಕರ ಮುಂದೂಡಿಕೆ
ಶಿವಮೊಗ್ಗ: ಪ್ರಗತಿ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಹಾಗೂ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ 30 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, 28 ರಂದು ಡೆಪ್ಯೂಟಿ ಚೀಫ್ ಲೇಬರ್ ಕಮೀಷನರ್ ಎಸ್.ಕೆ. ಚಂದ್ ನೇತೃತ್ವದಲ್ಲಿ ನಡೆದ ಸಂಧಾನದ ಮಾತುಕತೆಯಲ್ಲಿ ಕೇಂದ್ರ ಸರ್ಕಾರದ ಹಿರಿಯ ಸಂಶೋಧನಾ ಅಧಿಕಾರಿ ಎಸ್.ಸಿ. ಆರ್ಯ ಅವರು ನೌಕರರ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ 30 ರಂದು ನಡೆಯಬೇಕಿದ್ದ ಮುಷ್ಕರವನ್ನು ಮೂಂದುಡಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ರಾಜಶೇಖರ್ ತಿಳಿಸಿದ್ದಾರೆ.
ತಪಾಸಣಾ ಶಿಬಿರ
ಶಿವಮೊಗ್ಗ: ವಿನೋಬನಗರದಲ್ಲಿರುವ ನಯನ ಹೆಲ್ತ್ ಕ್ಲಿನಿಕ್ನಲ್ಲಿ 31 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಉಚಿತವಾಗಿ ಹೆಲ್ತ್ ಅಸ್ತಮಾ ತಪಾಸಣಾ ಶಿಬಿರ ಏರ್ಪಡಿಸಿದೆ. ಮಾಹಿತಿಗೆ- 08182-248149.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement