ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೂತ್ ಮಟ್ಟದ ಸಮಿತಿ ರಚನೆ

Rashmi Kasaragodu
Updated On : 30 Mar 2013, 11:59 am

ಸೊರಬ: ಮಾಜಿ ಸಚಿವ ಹಾಲಪ್ಪ ನೇತೃತ್ವದಲ್ಲಿ ಕೆಜೆಪಿ ಪಕ್ಷದ ವಿವಿಧ ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಪಕ್ಷ ಸೇರ್ಪಡೆ ಆನವಟ್ಟಿಯಲ್ಲಿ ನಡೆಯಿತು.
 ಹಂಚಿ, ಗಿಣಿವಾಲ, ಭಾರಂಗಿ, ಚಿಕ್ಕ ಇಡಗೋಡು, ಕಮನವಳ್ಳಿ, ಎಣ್ಣೆಕೊಪ್ಪ, ತಲ್ಲೂರು, ಆನವಟ್ಟಿ ಗ್ರಾಮಗಳಲ್ಲಿ  ಮುಖಂಡರೊಂದಿಗೆ ಚರ್ಚೆ ನಡೆಸಿ, ಬೂತ್ ಸಮಿತಿ ರಚಿಸಿದರು. ಆಯ್ಕೆಯಾದ ಅಧ್ಯಕ್ಷರಿಗೆ ಕೆಜೆಪಿ ಬಾವುಟ ನೀಡಿದರು. ಆಯ್ಕೆಗೊಂಡ ಸಮಿತಿ ಸದಸ್ಯರು ಪ್ರತಿ ಮನೆಗಳಿಗೆ ತೆರಳಿ ಪಕ್ಷದ ಕರಪತ್ರಗಳೊಂದಿಗೆ, ತಾಲ್ಲೂಕು ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ, ಮತ ಯಾಚಿಸಬೇಕು ಎಂದು ಸೂಚಿಸಿದರು.
ಸೇರ್ಪಡೆ: ಆನವಟ್ಟಿ ಹೋಬಳಿಯ ನೂರ್ ಅಹ್ಮದ್ ಜಂಗಳೆ, ಸಿಖಂದರ್ ಭಾಷ, ಶಾಂತಮ್ಮ, ಬಾಬುಸಾಬ್, ಮೆಹಬೂಬ್ ಆಲಿ, ಹಸೀನಾಬಾನು, ಕುಸುಮಮ್ಮ, ಚೆನ್ನಮ್ಮ, ಇಮಾಮ್ಸಾಬ್, ಮಂಜುನಾಥ್, ಅಬಿದ್ ಪಟೇಲ್, ಆನವಟ್ಟಿ ಆಜಾದ್ ನಗರದ ಇನ್ನೂ ಅನೇಕರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
 ಆನವಟ್ಟಿ ಜಿಪಂ ಕ್ಷೇತ್ರದ ಅಧ್ಯಕ್ಷ ಬಿ.ಬಸವರಾಜಪ್ಪ, ಮಲ್ಲಾಪುರ ಬಸವಂತಪ್ಪ, ಬಿ. ಮಲ್ಲಿಕಾರ್ಜುನ, ಶಿವಪ್ಪ ವಕೀಲ್, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಅಜೀಂಸಾಬ್, ನಿರಂಜನ್, ಮಂಜಪ್ಪ ಮರದರ, ರಾಜು ಬಡಿಗೇರಾ, ಬಸವನಗೌಡ, ಲೋಕನಗೌಡ, ಉಮೇಶ್ಗೌಡ, ಉಮೇಶ್ ಉಡುಗಣಿ, ಭೀಮಪ್ಪ ಮೂಡಿ, ಭಾಷಾಸಾಬ್, ಮೆಹಬೂಬ್ ಅಲಿ, ನಂದೀಶ್, ಕೃಷ್ಣಮೂರ್ತಿ, ಕೆರೆಯಪ್ಪ, ಸುಗುಣಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement