ಮಗುವಿಗೆ ಸಂಸ್ಕಾರ ಪೋಷಣೆ ಅಗತ್ಯ
ಸೊರಬ: ಸಂಸ್ಕಾರಯುತ ತಾಯಿಯ ಪೋಷಣೆಯಲ್ಲಿ ಬೆಳೆದ ಮಗು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪಗೊಳ್ಳುತ್ತದೆ ಎಂದು ಪಟ್ಟಣ ಸ್ನೇಹ ಸುರಭಿ ಮಹಿಳಾ ಸಮಾಜದ ಅಧ್ಯಕ್ಷೆ ರೇಣುಕಮ್ಮ ಗೌಳಿ ತಿಳಿಸಿದರು.
ಪಟ್ಟಣ ಮುರುಘಾಮಠದಲ್ಲಿ ತಾಕಸಾಪ ವತಿಯಿಂದ ಏರ್ಪಡಿಸಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಗಾರ್ತಿಯರು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಕುರಿತ ಉಪನ್ಯಾಸ ನೀಡಿ ಮಾತನಾಡಿದರು.
ಇಂದು ಕ್ಷೀಣಿಸುತ್ತಿರುವ ಅವಿಭಕ್ತ ಕುಟುಂಬಗಳಿಂದಾಗಿ ಮಕ್ಕಳಲ್ಲಿ ಹಂಚಿ ತಿನ್ನುವ ಬುದ್ಧಿ ವಿರಳವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಮಹಿಳೆ ಅಂದು, ಇಂದು, ಮುಂದು ಕುರಿತು ಕವಯತ್ರಿ ಮುಕ್ತಾಬಾಯಿ ಭಟ್ ಉಪನ್ಯಾಸ ನೀಡಿದರು.
ಶಹರಿ ರೋಜಗಾರ್ ಅಧ್ಯಕ್ಷೆ ಸರಸ್ವತಿ ನಾವುಡ ಕಾರ್ಯಕ್ರಮ ಉದ್ಘಾಟಿಸಿದರು. ತಾಕಸಾಪ ಅಧ್ಯಕ್ಷ ಕೃಷ್ಣಾನಂದ್, ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಗೀತಾ ಕೃಷ್ಣಮೂರ್ತಿ, ಸುಮಿತ್ರಾ, ಸುನಂದಾ ಇದ್ದರು.