ಶಿವಾನುಭವ ಗೋಷ್ಠಿ
ಚನ್ನಗಿರಿ: ಮಾನವನ ಜೀವನ ಆರಂಭ ಮತ್ತು ಅಂತ್ಯ ಕಾಣುವುದರೊಳಗೆ ರಾಷ್ಟ್ರಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡಿದಾಗ ಮನುಷ್ಯನ ಜೀವನ ಸಾರ್ಥಕ ಎಂದು ಇಲ್ಲಿನ ಕೇದಾರ ಶಾಖಾ ಹಿರೇಮಠದಲ್ಲಿ ಗುರುವಾರ ಸಂಜೆ ನಡೆದ 15ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಕೇದಾರಲಿಂಗ ಶಿವಶಾಂತವೀರ ಮಹಾಸ್ವಾಮಿಗಳು ಹೇಳಿದರು.ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮರಸ್ಯದಿಂದ ಜೀವಿಸಬೇಕು ಎಂದರು.