ಸ್ವಯಂಪ್ರೇರಿತ ರಕ್ತದಾನ ಶಿಬಿರ
ಶಿವಮೊಗ್ಗ: ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ 30 ರಂದು ಜೆಎನ್ಎನ್ಸಿಇ ಕಾಲೇಜು ಆವರಣದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದೆ. ಉದ್ಘಾಟನೆಯನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ನೇರವೇರಿಸುವರು. ಮುಖ್ಯಅತಿಥಿಯಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಕುವೆಂಪು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಕುಂದನ್ ಬಸವರಾಜ್, ಜೆಎನ್ಎನ್ಸಿಇ ಕಾಲೇಜು ಪ್ರಾಂಶುಪಾಲ ಶ್ರೀನಿವಾಸರಾವ್ ಕುಂಟೆ, ರೆಡ್ ಕ್ರಾಸ್ ಸಂಸ್ಥೆ ವಿಪತ್ತು ನಿವಾರಣಾ ತಂಡದ ತರಬೇತುದಾರ ಡಾ.ವಿ.ಎಲ್.ಎಸ್. ಕುಮಾರ್, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷ ಎ.ಎಂ. ಸುರೇಶ್, ರೋಟರಿ ಕ್ಲಬ್ ಅಧ್ಯಕ್ಷ ನರೇಶ್ ಜೈನ್, ಜೆಎನ್ಎನ್ಸಿಇ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಎಚ್.ಎಂ. ಮಹೇಶ್ವರಪ್ಪ ಪಾಲ್ಗೊಳ್ಳುವರು.