ಏ.1ರಿಂದ ಧರ್ಮಜಾಗೃತಿ ಸಭೆ
ಶಿವಮೊಗ್ಗ: ಹಾರನಹಳ್ಳಿಯ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಮಾರ್ಚ್ 29ರಿಂದ ಏಪ್ರಿಲ್ 1ರವರೆಗೆ 17ನೇ ಜಾತ್ರಾ ವೈಭವ, ಶ್ರೀ ಶ್ರೀನಿವಾಸ ಕಲ್ಯಾಣ, ಸಾಮೂಹಿಕ ವಿವಾಹ ಮತ್ತು ಧರ್ಮಜಾಗೃತಿ ಸಭೆ ಏರ್ಪಡಿಸಿದೆ. ಮಾ.31ರಂದು ಶ್ರೀ ವೆಂಕಟರಮಣ ಸ್ವಾಮಿಯ ವೈಕುಂಠ ವೈಭವ, ಶ್ರೀ ಶ್ರೀನಿವಾಸ ಕಲ್ಯಾಣ, ಏ.1ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಜನಜಾಗೃತಿ ಸಮ್ಮೇಳನವಿದ್ದು, ಶ್ರೀ ಒಡೆಯರ್ ಚಂದ್ರಶೇಖರ ಶಿವಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ, ರಾತ್ರಿ 9.30ಕ್ಕೆ ಶ್ರೀ ಬಸವೇಶ್ವರ ಕಲಾತಂಡ, ಹೊರಬಯಲು ಮತ್ತು ಶ್ರೀ ಶನೈಶ್ಚರ ಕಲಾತಂಡ- ಸನ್ನಿವಾಸ ಯುವಕ ಕಲಾ ತಂಡದಿಂದ ಶನಿ ಪ್ರಭಾವ, ರಾಜಾ ವಿಕ್ರಮ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.