ಕಾಂಗ್ರೆಸ್ ಪ್ರಚಾರ ಆರಂಭ
ಶಿಕಾರಿಪುರ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕೆಪಿಸಿಸಿ ಸದಸ್ಯ ಶಾಂತವೀರಪ್ಪಗೌಡ ಶನಿವಾರ ಪಟ್ಟಣದ ಶ್ರೀ ಹುಚ್ಚೂರಾಯಸ್ವಾಮಿ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಎಪಿಎಂಸಿ ಮತ್ತಿತರ ಕಡೆಗಳಲ್ಲಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಪಾರಿವಾಳದ ಶಿವರಾಂ, ಮಧುಸೂದನ, ಫಯಾಜ್ ಅಹ್ಮದ್, ಡಾ. ಕರಿಯಪ್ಪ, ಕೆ.ಪಿ. ಮಂಜುನಾಥ್, ಹಳ್ಳೂರು ಪರಮೇಶ್ವರಪ್ಪ, ಅಂಬಾರಗೊಪ್ಪದ ರಾಜಪ್ಪ, ಸುರೇಶ್ ಧಾರವಾಡದ ಮತ್ತಿತರರು ಹಾಜರಿದ್ದರು.