ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗುಂಡು ಹಾರಿ ಪೇದೆ ಸಾವು

Rashmi Kasaragodu
Updated On : 31 Mar 2013, 12:20 pm

ಬೆಂಗಳೂರು: ತರಬೇತಿ ವೇಳೆ ಆಕ್ಮಸಿಕವಾಗಿ ಗುಂಡು ಹಾರಿ ಕರ್ನಾಟಕ ರಾಜ್ಯ ಮೀಸಲು ಪಡೆ ಪೇದೆಯೊಬ್ಬ ಸಾವನ್ನಪ್ಪಿರುವ ಘಟನೆ ಕಸವನಹಳ್ಳಿ ಕೆಎಸ್ಆರ್ಪಿ ಮೈದಾನದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಸತೀಶ್ (27) ಮೃತ ಪೇದೆ. ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಂದೂಕು ತರಬೇತಿ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಆಗ ಬಂದೂಕನ್ನು ಸ್ವಚ್ಚಗೊಳಿಸುವ ಕಾರ್ಯವೂ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಎರಡು ಗುಂಡುಗಳು ಸತೀಶನ ದೇಹ ಸೇರಿವೆ. ಆದರೆ ಆಕಸ್ಮಿಕವಾಗಿ ಗುಂಡು ಹಾರಿದೆಯೋ ಅಥವಾ ಸತೀಶ್ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೋ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಗುಂಡು ಹಾರಿದ ಬಳಿಕ ಪೇದೆಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಸತೀಶ್ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದರು. ಶವಪರೀಕ್ಷೆಯ ಬಳಿಕ ಸತೀಶ್ನ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಈ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪಂಚಕರ್ಮ ಕ್ರಿಯಾಧ್ಯಾನ ಶಿಬಿರ
ಶಿವಮೊಗ್ಗ: ಡಾ.ಕೆ.ಎಸ್. ಶ್ರೀವತ್ಸ ಅವರು ಮಾ.31 ರಂದು ಬೆಳ್ಗಿಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿನೋಬನಗರದ ಮಾಧಮ ನೆಲೆಯಲ್ಲಿ ರೇಕಿ ಹೀಲಿಂಗ್ ಮಾಹಿತಿ ಮತ್ತು ಪಂಚಕರ್ಮ ಕ್ರಿಯಾಧ್ಯಾನ ಶಿಬಿರ ಏರ್ಪಡಿಸಿದ್ದಾರೆ. ಮಕ್ಕಳ ಬುದ್ಧಿವಿಕಾಸ, ವ್ಯಕ್ತಿತ್ವ ವಿಕಾಸಗೊಳ್ಳುವುದು, ನಿದ್ರಾಹೀನತೆ, ಗರ್ಭಕೋಶದ ತೊಂದರೆ ಮತ್ತು ಇತರೆ ಎಲ್ಲಾ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಎನ್.ಡಿ. ಸುಧೀಂದ್ರ ತಿಳಿಸಿದ್ದಾರೆ. ವಿವರಗಳಿಗಾಗಿ- 9964245271.
ತರಬೇತಿ ಶಿಬಿರ
ಶಿವಮೊಗ್ಗ: ರಂಗಾಯಣ ಏ.14ರಿಂದ 20 ದಿನಗಳ ಕಾಲ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಕಲೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಶಿಬಿರ ಏರ್ಪಡಿಸಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಹವ್ಯಾಸಿ ತಂಡಗಳು ಕಲಾವಿದರಿಗೆ ಪ್ರಸಾಧನ, ರಂಗವಿನ್ಯಾಸ ಹಾಗೂ ರಂಗ ಪರಿಕರ ನಿರ್ಮಾಣ, ಉಡುಗೆ- ತೊಡುಗೆ, ಮುಖವಾಡ ತಯಾರಿಕೆ, ಬೆಳಕಿನ ವಿನ್ಯಾಸ ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ ನೀಡಲಾಗವುದು.
30 ಜನರಿಗೆ ಅವಕಾಶವಿದ್ದು, ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಶಿಬಿರದ ನಿರ್ದೇಶಕ ಪುರೋಷೋತ್ತಮ ತಲವಾಟ ತಿಳಿಸಿದ್ದಾರೆ. ವಿವರಗಳಿಗಾಗಿ- 9480396217.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement