ಮಲೆನಾಡ ನಗರಿಯಲ್ಲಿ ಶಿಬಿರಗಳ ಅಬ್ಬರ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.30
ಇಷ್ಟು ದಿನ ಓದು, ಬರಹ, ಪರೀಕ್ಷೆಯ ಭಾರದಲ್ಲಿದ್ದ ಮಕ್ಕಳಿಗೀಗ ಬೇಸಿಗೆ ರಜೆಯ ಹಬ್ಬ. ಈ ಹಬ್ಬವನ್ನು ಮಕ್ಕಳು ಆಚರಿಸುವ ರೀತಿಯೇ ಬೇರೆ. ಸದಾ ಬ್ಯಾಟ್, ಬಾಲ್ ಹಿಡಿದು ಅಂಕಣಕ್ಕೆ ಓಡುವುದೊಂದೆ ಅವರ ಪ್ರತಿನಿತ್ಯದ ಕಾಯಕ.
ಈ ಹೊಣೆಯನ್ನು ಹೊರಲು ನಗರದ ಅನೇಕ ಸಂಘ, ಸಂಸ್ಥೆಗಳು ಬೇಸಿಗೆ ಶಿಬಿರವನ್ನು ಆರಂಭಿಸಿದ್ದು, ಶಿಬಿರದಲ್ಲಿ ಸಾಂಪ್ರದಾಯಿಕ ನೋಟ ಪ್ರದರ್ಶನ ಕಲೆ, ಸಂಗೀತ, ನಾಟಕ, ಸಾಹಸ, ಮ್ಯಾಜಿಕ್, ಕಂಪ್ಯೂಟರ್, ಭಾಷೆ ಕಲಿಕೆ, ಗಣಿತ, ಈಜು, ಚಿತ್ರಕಲೆ ಸ್ಪರ್ಧೆ, ಕರಾಟೆ, ಕುಸ್ತಿ, ಈಜು ಮತ್ತಿತರ ಕ್ರೀಡೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಬೇಸಿಗೆ ಶಿಬಿರಗಳ ಅಬ್ಬರ ಹೀಗಿದೆ.
ರಂಗಶಿಬಿರ: ರಂಗಬೆಳಕು ಏ.12ರಿಂದ ಮೇ 1ರ ವರೆಗೆ ನಗರದ ದುರ್ಗಿಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ರಂಗಶಿಬಿರ ಏರ್ಪಡಿಸಿದೆ. ಆಸಕ್ತರು ಕೊಟ್ರಪ್ಪ ಜಿ. ಹಿರೇಮಾಗಡಿ ಇವರ ಬಳಿ ಹೆಸರು ನೋಂದಾಯಿಸಬಹುದು. 9844569645, ರಂಗಾಯಣ ಏ.14ರಿಂದ 20 ದಿನಗಳ ಕಾಲ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ ರಂಗಕಲೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಶಿಬಿರ ಏರ್ಪಡಿಸಿದೆ. ಸಂಪರ್ಕಿಸಿ- 9844367071.
ಸಂಕೀರ್ಣ ಶಿಬಿರ: ಎನ್ಟಿ ರಸ್ತೆಯಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆ, ಎಲ್ಕೆಜಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 1ರಿಂದ 30ರ ವರೆಗೆ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ. ವಿನೋಬನಗರದ ನಳಂದ ಚೆಸ್ ಅಕಾಡೆಮಿಯಲ್ಲಿ ಪ್ರಾಥಮಿಕ ಹಂತದ ಚಿತ್ರಕಲೆ, ಗ್ರೀಟಿಂಗ್ ತಯಾರಿ ಮತ್ತು ಕ್ಲೇ ಮಾಡಲಿಂಗ್ ಬಗ್ಗೆ ತರಬೇತಿ ನೀಡಲಾಗುವುದು. 9243315859, 9844420889.
ಸ್ಪೋಕನ್ ಇಂಗ್ಲಿಷ್: ಸಾಗರ ರಸ್ತೆಯ ಶ್ರೀ ಜಗದ್ಗುರು ದಾರುಕಾಚಾರ್ಯ ಐಟಿಐನಲ್ಲಿ 5ನೇ ತರಗತಿ ಮೇಲ್ಪಟ್ಟವರಿಗೆ ಏಪ್ರಿಲ್ 1ರಿಂದ 30ರವರೆಗೆ ಸ್ಪೋಕನ್ ಇಂಗ್ಲಿಷ್, ವೇದಿಕ್ ಗಣಿತ, ಜ್ಞಾಪಕ ಶಕ್ತಿ ಅಭಿವೃದ್ಧಿ, ಕಂಪ್ಯೂಟರ್ ಬಗ್ಗೆ ತರಬೇತಿ ಮಾಹಿತಿಗೆ 9141940723 ಸಂಪರ್ಕಿಸಿ.
ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಕಲಿಕಾ ಶಿಬಿರವನ್ನು ನಗರದ ಕಲ್ಲಳ್ಳಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ, ಕಲ್ಲಳ್ಳಿ ಶಿವಗಂಗಾ ಯೋಗ ಕೇಂದ್ರ ಮಾ.31ರಿಂದ ಏಪ್ರಿಲ್ 7 ರವರೆಗೆ ಮಕ್ಕಳ ವ್ಯಕ್ತಿತ್ವ ವಿಕಾಸದ ಬೇಸಿಗೆ ಶಿಬಿರ ಆಯೋಜಿಸಿದೆ. 10ರಿಂದ 14 ವಯೋವುತಿಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. 9449851454, 94481 23344.
ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಏಪ್ರಿಲ್ 1 ರಿಂದ ಉಚಿತವಾಗಿ ಕೈ ಕಸೂತಿ, ಹೊಲಿಗೆ, ಬೇಸಿಕ್ ಕಂಪ್ಯೂಟರ್ ಹಾಗೂ ಬ್ಯಾಂಕಿಂಗ್ (ಅಕೌಂಟಿಂಗ್) ತರಬೇತಿ ಶಿಬಿರ, 9945748817. ಮ್ಯಾಥಮೇಟಿಕ್ಸ್ ಅಕಾಡೆಮಿ ನುರಿತ ಉಪನ್ಯಾಸಕರಿಂದ 6 ಮತ್ತು 9ನೇ ತರಗತಿಯ ಸಿಬಿಎಸ್ಇ ಮತ್ತು ರಾಜ್ಯ ಪಠ್ಯಪುಸ್ತಕದ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಎಪ್ರಿಲ್ 4ರಿಂದ ತರಗತಿ ನಡೆಸಲಿದೆ.
ಕ್ರೀಡಾ ತರಬೇತಿ: ಡೈಮಂಡ್ ಕ್ರಿಕೆಟ್ ಕ್ಲಬ್ ಏಪ್ರಿಲ್ 10 ರಿಂದ 28ರ ವರಗೆ 8 ರಿಂದ 18 ವರ್ಷದೊಳಗಿನ ಬಾಲಕರಿಗೆ ನಗರದ ಎನ್ಇಎಸ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ, 9448139982, ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಎಪ್ರಿಲ್ 1ರಿಂದ 15ರವರೆಗೆ ನಗರದ ಎನ್ಇಎಸ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಿದೆ.9986419637. ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಏಪ್ರಿಲ್ 2 ರಿಂದ ಮೇ 2 ರವರೆಗೆ ಒಂದು ತಿಂಗಳ ಕಾಲ ನಗರದ ಗೋಪಾಲಗೌಡ ಬಡಾವಣೆ ಕ್ರಿಕೆಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದೆ.9448256122.
ಕರಣ್ ಸ್ವಿಮ್ಮಿಂಗ್ ಅಕಾಡೆಮಿ ಏಪ್ರಿಲ್ 1 ರಿಂದ ಬೇಸಿಗೆ ಈಜು ರಬೇತಿ ಶಿಬಿರ ಹಮ್ಮಿಕೊಂಡಿದ್ದು, ಆಸಕ್ತರು 9886401113. ಶ್ರೀ ಕಲಾ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಒಂದು ತಿಂಗಳ ಕಾಲ ಮಕ್ಕಳ ಉಡುಪುಗಳು ಹಾಗೂ ಮಹಿಳೆಯರ ಡ್ರೆಸ್-ಬ್ಲೌಸ್ ಮೇಕಿಂಗ್ ತರಬೇತಿ ಶಿಬಿರ ಏರ್ಪಡಿಸಿದೆ. 08182-295161.
ಯುನಿಟೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಏಪ್ರಿಲ್ 1 ರಿಂದ 21 ರ ವರೆಗೆ ವಿನೋಬನಗರದ ಹುಡ್ಕೋದಲ್ಲಿರುವ ರಾಯಲ್ ಡೈಮಂಡ್ ಶಾಲೆಯಲ್ಲಿ ಬೇಸಿಗೆ ರಜಾ ಪ್ರಯುಕ್ತ ಕರಾಟೆ ಮತ್ತು ಮಾಯ್ಥಾಯ್ಡ್ ತರಬೇತಿ ಶಿಬಿರ ನಡೆಸಲಿದೆ. 984515301.
ಪರಿಶಿಷ್ಟ ವಿದ್ಯಾರ್ಥಿಗಳಿಗೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕಿನ ಆಯ್ದ ಶಾಲೆಗಳಲ್ಲಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಈ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಊಟ, ವಸತಿ, ವಸ್ತ್ರ ನೀಡುವುದರೊಂದಿಗೆ, ಹಾಕಿ, ಬ್ಯಾಸ್ಕೆಟ್ ಬಾಲ್, ಖೋಖೋ, ಬ್ಯಾಟ್ಮಿಟನ್, ಹ್ಯಾಂಡ್ಬಾಲ್, ಕ್ರಿಕೆಟ್ ಮತ್ತಿತರ ಕ್ರೀಡೆಗಳ ಬಗ್ಗೆ ತರಬೇತಿ ನೀಡುತ್ತದೆ. ಮಾಹಿತಿಗೆ- 996459986.