ಸಂಸದರ ಶಾಲೆಯಿಂದಲೇ ಆರ್ಟಿಇ ಉಲ್ಲಂಘನೆ!
ವಿಶೇಷ ವರದಿ
ಕ.ಪ್ರ.ವಾರ್ತೆ, ಬೆಂಗಳೂರು, ಮಾ.30
ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆಗೆ ಮಿತಿಯೇ ಇಲ್ಲದಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ಎವೈ. ರಾಘವೇಂದ್ರ ಅವರಿಗೆ ಸೇರಿದ ಶಿವಮೊಗ್ಗದ ಮೈತ್ರಿ ಶಾಲೆಯಲ್ಲೇ ಹೆಚ್ಚುವರಿ ಶುಲ್ಕ ಪಡೆದಿರುವ ಪ್ರಕರಣ ಬಯಲಾಗಿದೆ.
ಕೇಂದ್ರ ಸರ್ಕಾರ ಜಾರಿ ಮಾಡಿದ ಕಾನೂನನ್ನು ಸಂಸದರು ಮುಖ್ಯಸ್ಥರಾಗಿರುವ ಶಾಲೆಯೇ ಉಲ್ಲಂಘಿಸಿದಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಮೈತ್ರಿ ಶಾಲೆಯಲ್ಲಿ 2012- 13ನೇ ಸಾಲಿನಲ್ಲಿ ಸೀಟು ದೊರೆತಿದೆ.
ಆದರೆ, ಶಾಲಾ ಆಡಳಿತ ಮಂಡಳಿ ಅವರು ಆರ್ಟಿಇ ಕಾನೂನು ಉಲ್ಲಂಘಿಸಿ ಹೆಚ್ಚುವರಿಯಾಗಿ 8750 ಶುಲ್ಕ ಪಡೆದಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಗಮನಿಸಿದರೇ ಖಾಸಗಿ ಶಾಲೆಗಳು ಹೆಚ್ಚುವರಿಯಾಗಿ ಪಡೆಯುತ್ತಿರುವ ಶುಲ್ಕಕ್ಕೆ ಕಡಿವಾಣ ಬೀಳದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಮೈತ್ರಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಕೇಳುತ್ತಿರುವ ಕಾರಣ ಪೋಷಕರೊಬ್ಬರು ಬೇಸತ್ತು ತನ್ನ ಮಗುವನ್ನು ಈ ಶಾಲೆಯಿಂದ ಬಿಡಿಸಿ ಬೇರೊಂದು ಸರ್ಕಾರಿ ಶಾಲೆಗೆ ಸೇರಿಸುವುದಕ್ಕೆ ತೀರ್ಮಾನಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಅವರು ಹೆಚ್ಚುವರಿ ಶುಲ್ಕಪಡಿಯುವಂತಿಲ್ಲ ಎಂದು ಆರ್ಟಿಇ ನಿಯಮಾವಳಿ ಇದ್ದರೂ ಆಡಳಿತ ಮಂಡಳಿ ಅವರು ನೀವು ಮೊದಲು ಹಣ ಕಟ್ಟಿ, ಸರ್ಕಾರದಿಂದ ಅನುದಾನ ಬಂದ ಮೇಲೆ ಮರುಪಾವತಿ ಮಾಡುತ್ತೇವೆ ಎಂದು ಹೇಳಿ ಹಣ ವಸೂಲಿ ಮಾಡಿದ್ದಾರೆ ಎಂದು ಪೋಷಕರು “OÚ«ÚsÚ®Úúڒ¥æàM¦Væ ಹೇಳಿಕೊಂಡಿದ್ದಾರೆ.
ಪತ್ರದಲ್ಲೇನಿದೆ?: ಮಗುವಿಗೆ ಅನ್ಯಾಯವಾಗಿರುವ ವಿಷಯ ಕುರಿತು ಆರ್ಟಿಇ ಕಾರ್ಯಪಡೆಗೆ ಪತ್ರ ಬರೆದು ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ. ಮಗುವಿಗೆ ಶೂ ಮತ್ತು ಕಾಲುಚೀಲ ಹಾಗೂ ಶಾಲೆಯ ಮನರಂಜನೆ ಕಾರ್ಯಕ್ರಮಕ್ಕಾಗಿ 4,000 ಮತ್ತು ಶಾಲಾ ಬಸ್ಸಿಗಾಗಿ 4750 ಹಣವನ್ನು ನೀಡಲಾಗಿದೆ. ಹಣ ನಿಮ್ಮ ಪಾಸ್ ಪುಸ್ತಕಕ್ಕೆ ಬರುತ್ತದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.
ಈ ರೀತಿ ಹಣ ವಸೂಲಿ ಮಾಡಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸವಂಚಿತರಾಗುವುದರಲ್ಲಿ ಸಂದೇಹವಿಲ್ಲ. ಈ ಯೋಜನೆ ನನಗೆ ಸೂಕ್ತವಿಲ್ಲವೆಂದು ಸರ್ಕಾರಿ ಶಾಲೆಗೆ ಸೇರಿಸಲು ತಯಾರಾಗಿದ್ದೇವೆ. ಈ ಕೂಡಲೇ ಇದನ್ನು
ಶಾಲಾ ಮತ್ತು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ನಮ್ಮ ಹಣ ವಾಪಸು ಕೊಡಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಹೆಚ್ಚುವರಿ ಶುಲ್ಕ ಪಡೆದಿರುವುದು ತಪ್ಪು
ಶಾಲಾ ಆಡಳಿತ ಮಂಡಳಿ ಅವರು ಹೆಚ್ಚುವರಿ ಶುಲ್ಕ ಪಡೆದಿರುವುದು ತಪ್ಪು. ಈ ಬಗ್ಗೆ ನಾನು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರಿಗೆ ಕಾನೂನು ಕ್ರಮಕೈಗೊಳ್ಳುವಂತೆ ತಿಳಿಸುತ್ತೇನೆ.
ಎ. ದೇವಪ್ರಕಾಶ್, ಪ್ರಾಥಮಿಕ ಶಿಕ್ಷಣ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
ನನ್ನ ಗಮನಕ್ಕೆ ಬಂದಿಲ್ಲ
ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ಪೋಷಕರು ನನ್ನ ಬಳಿ ಬಂದು ದೂರು ನೀಡಿದ ಪಕ್ಷದಲ್ಲಿ ಪರಿಶೀಲಿಸಿ
ಕಾನೂನು ಕ್ರಮ ಕೈಗೊಳ್ಳುತ್ತೇನೆ. ಹೆಚ್ಚುವರಿ ಶುಲ್ಕ ಪಡೆದಿರುವುದು ತಪ್ಪು.
ಎನ್.ಎಸ್. ಕುಮಾರ್
ಉಪನಿರ್ದೇಶಕರು, ಶಿವಮೊಗ್ಗ