45 ಕುರಿಗಳ ಸಾವು
ಕ.ಪ್ರ.ವಾರ್ತೆ,ಶಿರಾಳಕೊಪ್ಪ, ಮಾ.31
ಸಮೀಪದ ಮುಳಕೊಪ್ಪ ತಾಂಡದ ಬಳಿ ಬೆಳೆಯಿಲ್ಲದ ಹಂಕಲು ಜಮೀನಿನಲ್ಲಿ ಮೇಯುತ್ತಿದಂತಹ 45ಕುರಿಗಳು ಏಕಾಏಕಿ ಸಾವನ್ನಪ್ಪಿ ಹಲವು ಕುರಿಗಳು ಅಸ್ವಸ್ಥ ವಾಗಿರುವ ಘಟನೆ ಸಂಭವಿಸಿದೆ. ಪ್ರತಿದಿನದಂತೆ ಭಾನುವಾರವೂ ಕುರಿಗಳು ಮೇಯುತ್ತಿರುವಾಗ ಇದ್ದಕ್ಕಿದಂತೆ ಹಲವು ಕುರಿಗಳು ಸಾವನ್ನಪ್ಪಿವೆ. ಕುರಿ ಮಾಲೀಕ ವಾಸಪ್ಪ ಸಿಗಾಡೆಪ್ಪ ಕವಣಿ ಆತಂಕ ಗೊಂಡು ಶಿರಾಳಕೊಪ್ಪ ಪಶು ಚಿಕಿತ್ಸಾಲಯಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ವೈದ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಅವರ ಸಹಾಯಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಒಟ್ಟು 45ಕುರಿಗಳು ಸಾವನ್ನಪ್ಪಿವೆ.