ಇಂದಿನಿಂದ ಹಿಂದಿ ಕಲಿಕಾ ತರಬೇತಿ ಶಿಬಿರ
ಸಾಗರ: ತಾಲೂಕಿನ ಆನಂದಪುರಂ ಮುರುಘಾಮಠದಲ್ಲಿ ಬೆಂಗಳೂರಿನ ರಾಜಭಾಷಾ ಸಂಘರ್ಷ ಸಮಿತಿ ಆಶ್ರಯದಲ್ಲಿ ಏ. 1 ರಿಂದ 8ರವರೆಗೆ ಹಿಂದಿ ಕಲಿಕಾ ತರಬೇತಿ ಶಿಬಿರ ಆಯೋಜಿಸಲಾಗಿದೆ. ದೆಹಲಿಯ ರಾಜೋರಿ ಯಾಜಿ ಹಾಗೂ ರಮೇಶ್ ಆರ್ಯನ್ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. 5 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಶಿಬಿರ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಮುರುಘಾಮಠ ಶಿಕ್ಷಣ ಸಂಸ್ಥೆಯವರನ್ನು ಸಂಪರ್ಕಿಸಲು ಕೋರಲಾಗಿದೆ.