ಈಸ್ಟರ್ ಹಬ್ಬ ಆಚರಣೆ
ಕ.ಪ್ರ.ವಾರ್ತೆ,ಶಿವಮೊಗ್ಗ, ಮಾ.31
ಶರಾವತಿ ನಗರದ ಬಾಲ ಯೇಸುವಿನ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ಈಸ್ಟರ್ ಹಬ್ಬ ಆಚರಿಸಲಾಯಿತು. ಕ್ರೈಸ್ತ ಸಮುದಾಯಕ್ಕೆ ಅತೀ ಶ್ರೇಷ್ಠ ಹಬ್ಬ ಇದ್ದಾಗಿದ್ದು, ಯೇಸುವಿನ ಪುನರುತ್ಥಾನದ ಹಬ್ಬ ಅಥವಾ ಈಸ್ಟರ್ ಹಬ್ಬ ಎಂದೇ ಖ್ಯಾತಿ ಪಡೆದಿದೆ. ಈ ಹಬ್ಬವನ್ನು ಆಚರಿಸಲು ನೂರಾರು ಭಕ್ತಾದಿಗಳು ರಾತ್ರಿ 11 ಘಂಟೆಯಿಂದ ಆಲಯದ ಮುಂದೆ ಸೇರಿದ್ದರು.
ಆಚರಣೆಯ ಅಂಗವಾದ ಆಶೀರ್ವಚನ, ಪಾಸ್ಕ ಮೊಂಬತ್ತಿಯ ಮೆರವಣಿಗೆ, ದೇವರ ವಾಕ್ಯದ ವಿಧಿ ಹಾಗೂ ದಿವ್ಯ ಬಲಿಪೂಜೆ ಹೀಗೆ ವಿವಿಧ ರೀತಿಯ ಕಾರ್ಯಕ್ರಮ ನಡೆಯಿತು. ಧರ್ಮಕೇಂದ್ರದ ಗುರು ಮಾರ್ಕ್ ಡಿಸಿಲ್ವ, ಎಸ್.ಜೆ. ದೇವಾದತ್ ಕಾಮತ್ ಬಲಿಪೂಜೆ ಅರ್ಪಿಸಿದರು. ಶಿವಮೊಗ್ಗ ಧರ್ಮಕ್ಷೇತ್ರದ ಯುವ ನಿರ್ದೇಶಕ ರೋನಾಲ್ಡ್ ವೇಗಸ್ ಪ್ರವಚನ ನೀಡಿದರು.