ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಲಾವಿದನಿಗೆ ಅಭಿನಯವೇ ಆಸ್ತಿ

Lingaraj Badiger
Updated On : 1 Apr 2013, 11:09 am

ಕ.ಪ್ರ.ವಾರ್ತೆ, ಸಾಗರ, ಮಾ.31
ಕಲಾವಿದನಿಗೆ ಅಭಿನಯವೇ ಆಸ್ತಿಯಾಗಿದ್ದು, ಪ್ರಚಾರ, ಹಣಗಳಿಕೆ, ಐಷಾರಾಮಿ ಜೀವನದ ನಿರೀಕ್ಷೆ ಇರಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಹೇಳಿದರು.
 ಇಲ್ಲಿನ ಕಾಗೋಡು ರಂಗಮಂಚ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ  ಹಮ್ಮಿಕೊಂಡಿದ್ದ 3 ದಿನಗಳ ನಾಟಕೋತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.
ನಮ್ಮ ಸಾಧನೆ ನಮಗೆ ತೃಪ್ತಿ ನೀಡಿದೆಯೇ ಎನ್ನುವುದೇ ಕಲಾವಿದನೊಬ್ಬನ ಸರ್ವಾಂಗೀಣ ಪ್ರಗತಿಗೆ ಮಾರ್ಗ ಸೂಚಿಯಾಗಬೇಕೇ ಹೊರತು ಬೇರೆಯವರನ್ನು ಮೆಚ್ಚಿಸುವುದಲ್ಲ ಎಂದರು.
ಪರಿಣಾಮಕಾರಿ ಮಾಧ್ಯಮ: ಇತ್ತೀಚಿಗೆ ಜನರು ದೃಶ್ಯ ಮಾಧ್ಯಮವೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಇತರೆ ಎಲ್ಲಾ ಮಾಧ್ಯಮಗಳಿಗಿಂತ ರಂಗಭೂಮಿ ಪರಿಣಾಮಕಾರಿ ಮಾಧ್ಯಮವಾಗಿದ್ದು, ನೋಡುಗರನ್ನು ನೇರವಾಗಿ ತಲುಪಿ, ತಕ್ಷಣದ ಫಲಿತಾಂಶ ಪಡೆಯಲು ರಂಗಭೂಮಿಯಿಂದ ಮಾತ್ರ ಸಾಧ್ಯ. ಅಭಿನಯ ಕಲೆ ರೂಢಿಸಿಕೊಳ್ಳುವ ಜೊತೆಗೆ ರಂಗಭೂಮಿ ವ್ಯಕ್ತಿತ್ವ ರೂಪಿಸಿಕೊಳ್ಳಲೂ ಸಹಕಾರಿ ಎಂದರು.
ರಂಗಮಂಚ ಅಧ್ಯಕ್ಷ ಕಾಗೋಡು ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಗ್ವೆ ಈಶ್ವರನಾಯಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement