ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಂಗ್ರೆಸ್ ನಾಯಕತ್ವ ಖಚಿತ: ಕಿಸಾನ್ ಶೆಲ್ ಅಧ್ಯಕ್ಷ ವಿಶ್ವಾಸ

Lingaraj Badiger
Updated On : 2 May 2013, 11:02 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮೇ.1
  ಶಿಕಾರಿಪುರ ತಾಲೂಕಿನಲ್ಲಿ ಯಾರೂ ನಾಯಕರಿಲ್ಲ. ಇಲ್ಲಿ ನಾಯಕತ್ವವನ್ನು ಕಾಂಗ್ರೆಸ್ ಪಕ್ಷವೇ ವಹಿಸುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಿಸಾನ್ ಶೆಲ್ ಅಧ್ಯಕ್ಷ ನಗರದ ಮಹದೇವಪ್ಪ ತಿಳಿಸಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಶಿಕಾರಿಪುರ ತಾಲೂಕಿನಲ್ಲಿ ಕಾಂಗ್ರೆಸ್ ಹವಾ ಇದ್ದು, ಕಾಂಗ್ರೆಸ್ ಹೋದ  ಕಡೆಯಲ್ಲೆಲ್ಲಾ ಕಾಂಗ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
  ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ 1978 ರ ಪೂರ್ವದಲ್ಲಿ ಮಾಡಿದ ಅರಣ್ಯ ಭೂಮಿ ಬಗ್ಗೆ ಈ ವರೆಗೆ ಯಾವುದೇ ಕ್ರಮವಿಲ್ಲ. ಹಾಗೆಯೇ 2006ರ ಅರಣ್ಯ ಹಕ್ಕು ಕಾಯಿದೆ ಸಮರ್ಪಕ ಜಾರಿ ಯಾಗಿಲ್ಲ. 50 ಮತ್ತು 53ನೇ ನಂ ನಲ್ಲಿ ಅರ್ಜಿಹಾಕಿ ಹಲವು ವರ್ಷವಾದರೂ ಜಮೀನು ಮಂಜೂರಾತಿ ಆಗಿಲ್ಲ ಎಂದರು.
ಪಕ್ಕಪೋಡಿ ಇಲ್ಲ: ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡಿ ಮಂಜೂರು ಆಗಿರುವ ಜಮೀನನ್ನು ಪಕ್ಕ ಪೋಡಿ ಮಾಡಿಲ್ಲ. ಕೆಲವು ಹಳ್ಳಿಗಳು ಇಂದು ಅರಣ್ಯದಲ್ಲಿವೆ ಅರಣ್ಯದಲ್ಲಿ ಇರುವವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಒಕ್ಕಲೆಬ್ಬಿಸುವ 91 ಎ.ಕಾಯಿದೆಯನ್ನು ವಜಾ ಮಾಡಬೇಕು ಎಂದು ಅಳರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement