ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭ್ರಷ್ಟ ಪಕ್ಷಕ್ಕೆ ತಕ್ಕ ಪಾಠ ಕಲಿಸಿ

Lingaraj Badiger
Updated On : 2 May 2013, 11:14 am

ಕ.ಪ್ರ.ವಾರ್ತೆ, ಸಾಗರ, ಮೇ.1 ಈ ಚುನಾವಣೆಯಲ್ಲಿ ಮತದಾರರು ಭ್ರಷ್ಟ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿ ಪ ಮಾಜಿ ಸದಸ್ಯ ವಿ.ಎಸ್. ಉಗ್ರಪ್ಪ ಹೇಳಿದರು.
 ಪಟ್ಟಣದ ಸಾಗರ್ ಹೊಟೇಲ್ ವೃತ್ತದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,  ಶಿವಮೊಗ್ಗದಂತಹ ಹೋರಾಟದ ನೆಲದಲ್ಲಿ ಯಡಿಯೂರಪ್ಪ, ಈಶ್ವರಪ್ಪರಂತಹ ಭ್ರಷ್ಟಾಚಾರಿಗಳು ಇರುವುದು ನಮ್ಮ ದುರಂತ ಎಂದರು.
 ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದಷ್ಟು ಭ್ರಷ್ಟಾಚಾರ ಯಾವ ಸರ್ಕಾರದ ಅವಧಿಯಲ್ಲೂ ನಡೆದಿರಲಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸಾಲುಸಾಲಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಸಮಗ್ರ ತನಿಖೆ ನಡೆಸಿ, ಭ್ರಷ್ಟರನ್ನು ಶಾಶ್ವತವಾಗಿ ಜೈಲಿಗೆ ಕಳಿಸುವ ಕೆಲಸ ಮಾಡಲಾಗುವುದು ಎಂದರು.
ಚರಿತ್ರೆ ನಿರ್ಮಾಣ: ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಮಾತನಾಡಿ, ಚರಿತ್ರೆ ನಿರ್ಮಾಣ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಒಂದು ಭ್ರಷ್ಟ ಸರ್ಕಾರ ಕಿತ್ತೊಗೆಯುವ ಹಾಗೂ ಮತ್ತೊಂದು ಭ್ರಷ್ಟಾಚಾರ ಮುಕ್ತ ಹಾಗೂ ಸಾಮಾಜಿಕ ನ್ಯಾಯ ಪ್ರತಿಷ್ಠಾಪಿಸುವ ಸರ್ಕಾರ ಸ್ಥಾಪನೆಗೊಳಿಸುವ ಶುಭ ಮುಹೂರ್ತ ಇದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶತಃಸಿದ್ಧ ಎಂದರು.
 ಎಐಸಿಸಿ ವೀಕ್ಷಕ ಜೀತೇಂದ್ರ ಪ್ರಸಾದ್, ಮಂಜುನಾಥ ಭಂಡಾರಿ, ವಿಪ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಮಕ್ಬೂಲ್ ಅಹಮದ್, ತೀ.ನ. ಶ್ರೀನಿವಾಸ್, ಕೆ.ಜಿ. ಪ್ರಶಾಂತ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement