ಸರಬ್ಜಿತ್ ಸಿಂಗ್ ಸಾವಿಗೆ ಅನಂತಕುಮಾರ್ ವಿಷಾದ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೇ 2
ಪಾಕಿಸ್ತಾನದ ಜೈಲಿಯಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸರಬ್ಜಿತ್ ಸಿಂಗ್ ಅಲ್ಲಿನ ಕೈದಿಗಳಿಂದಲ್ಲೇ ಹತ್ಯೆಗೀಡಾಗಿದ್ದು ದೊಡ್ಡ ದುರಂತ ಎಂದು ಸಂಸದ ಅನಂತ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದನ್ನು ಕೇಂದ್ರ ಸರ್ಕಾರ ಪ್ರಶ್ನಿಸದೆ, ಅಗತ್ಯ ಕ್ರಮಕೈಗೊಳ್ಳದಿರುವುದು ವಿಪರ್ಯಾಸ. ಈ ಕೃತ್ಯಕ್ಕೆ ಪಾಕಿಸ್ತಾನ ಎಷ್ಟು ಹೊಣೆಯೋ, ಅಷ್ಟೇ ಹೊಣೆ ಕೇಂದ್ರ ಯುಪಿಎ ಸರ್ಕಾರದ್ದು ಎಂದರು.
ಬಿಜೆಪಿ ಈ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತಲಿದೆ. ಅಲ್ಲದೇ, ಸರಬ್ಜಿತ್ ಸಿಂಗ್ ಅವರ ಶವವನ್ನು ಭಾರತಕ್ಕೆ ತರಲು ಎಲ್ಲ ರೀತಿಯಿಂದಲೂ ಯತ್ನಿಸಲಾಗುವುದು. ಹುತಾತ್ಮನಾಗಿರುವ ಸರಬ್ಜಿತ್ ಸಿಂಗ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಬೇಕು ಎಂದರು.