30 ಪ್ರಕರಣ, 64 ಮಂದಿ ಬಂಧನ
ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ 248 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸ್ಥಳ ವಿರೂಪದ 3 ಪ್ರಕರಣಗಳು, ವಾಹನ ದುರ್ಬಳಕೆಯ 13, ಅಕ್ರಮ ಮದ್ಯ ಮಾರಾಟದ 183, ಹಣ ಹಂಚಿಕೆಯ 14 ಹಾಗೂ ಇತರೆ 30 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
64 ಮಂದಿ ಬಂಧನ: ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 64 ಜನರನ್ನು ಬಂಧಿಸಲಾಗಿದೆ. ಸಿಆರ್ಪಿಸಿ ಕಲಂ 107 ಅಡಿಯಲ್ಲಿ 352, ಕಲಂ 110 ಅಡಿಯಲ್ಲಿ 52, ಕಲಂ 109 ಅಡಿಯಲ್ಲಿ 12, ಮುಂಜಾಗ್ರತಾ ಕ್ರಮವಾಗಿ 914 ಪ್ರಕರಣ ದಾಖಲಿಸಲಾಗಿದೆ. 309 ಜನರಿಂದ ಷರತ್ತಿಗೊಳಪಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 2258 ಜಾಮೀನುರಹಿತ ವಾರೆಂಟಟ್ಜಾರಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 5,062 ಬಂದೂಕು ಪರವಾನಿಗೆದಾರರಿದ್ದು, ಇವರಲ್ಲಿ 50 ಜನರಿಗೆ ವಿನಾಯಿತಿ ನೀಡಿ, ಉಳಿದವರಿಂದ ಬಂದೂಕು ಠೇವಣಿ ಪಡೆಯಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ 40 ಜನರನ್ನು ಬಂಧಿಸಲಾಗಿದೆ. ಅಬಕಾರಿ ಕಾಯ್ದೆ ಅಡಿ 76 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3,126 ಲೀಟರ್ಮ್ದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 6,25,283 ರು. ಎಂದು ಕೌಶಲೇಂದ್ರ ಕುಮಾರ್ಹೇಳಿದರು. ಇದೂವರೆಗೆ 28,37,420 ರು. ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಇತರೆ ವಸ್ತುಗಳ ಮೊತ್ತ 28,79,000 ರು. ಎಂದರು.
ಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ ಸ್ಥಾಪಿಸಿರುವ 1,605 ಮತಗಟ್ಟೆಗಳಲ್ಲಿ 247 ಅತಿ ಸೂಕ್ಷ್ಮ, 467 ಸೂಕ್ಷ್ಮ, 891 ಸಾಮಾನ್ಯ, 189 ವಲ್ನರಬಲ್, 605 ಕ್ರಿಟಿಕಲಲ್ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅತಿ ಹೆಚ್ಚು ಮತಗಟ್ಟೆಗಳಿರುವುದು ತೀರ್ಥಹಳ್ಳಿ ಕ್ಷೇತ್ರದಲ್ಲಿ. ಅತಿ ಹೆಚ್ಚು ಅತಿ ಸೂಕ್ಷ್ಮ ಮತಗಟ್ಟೆಗಳಿರುವುದೂ ಇಲ್ಲಿಯೇ ಎಂದರು.
ವೆಬ್ಕಾಸ್ಟಿಂಗ್: ಜಿಲ್ಲೆಯ ಆಯ್ದ 35 ಬೂತ್ಗಳಲ್ಲಿ ವೆಬ್ಕ್ಯಾಮರಾ ಅಳವಡಿಸಲಾಗಿದೆ. ಇಲ್ಲಿ ನಡೆಯುವ ಚಟುವಟಿಕೆಯನ್ನು ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದ್ದಾರೆ.
ಮತದಾನ ಪ್ರಕ್ರಿಯೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಇದರಿಂದ ಪ್ರಚಾರ ದೊರೆಯುವುದು ಎಂದು ಅವರು ಹೇಳಿದರು.