ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತಕ್ಕಡಿ ಪ್ರದರ್ಶಿಸಿ ಮತಯಾಚನೆ

Lingaraj Badiger
Updated On : 4 May 2013, 11:22 am

ಕ.ಪ್ರ.ವಾರ್ತೆ,ಶಿವಮೊಗ್ಗ, ಮೇ 3
ವಿಶಿಷ್ಟ ಪ್ರಯೋಗಗಳ ಮೂಲಕ ಮತಯಾಚನೆ ಮತ್ತು ಜನಜಾಗೃತಿ ಮೂಡಿಸುತ್ತಿರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉಷಾ ಜಯರಾಜ್ ಮತ್ತು ಅವರ ಬೆಂಬಲಿಗರು ಶುಕ್ರವಾರ ನಗರದ ಮಹಾತ್ಮಾ ಗಾಂಧಿ ಉದ್ಯಾನದ ಎದುರು ತಕ್ಕಡಿ ಪ್ರದರ್ಶನದ ಮೂಲಕ ಮತದಾರರ ಗಮನ ಸೆಳೆದರು.
ನ್ಯಾಯಾಲಯದಲ್ಲಿ ನ್ಯಾಯದೇವತೆ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಕೈಯಲ್ಲಿ ತಕ್ಕಡಿ ಹಿಡಿದಿದ್ದಾಳೆ. ಆದರೆ ಸಮಾಜದಲ್ಲಿ ನ್ಯಾಯ ಎಲ್ಲಿದೆ, ಚುನಾವಣೆಗಳು ಭ್ರಷ್ಟಾಚಾರದ ಕೂಪವಾಗುತ್ತಿವೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕೆಜೆಪಿ, ಕಾಂಗ್ರೆಸ್ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ  ಹಣ ಹಂಚುವ ಮೂಲಕ ಮತದಾರರನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ. ಈ ಕಾರಣದಿಂದ ನಾವು ತಕ್ಕಡಿ ಪ್ರದರ್ಶನ ಮಾಡುವ ಮೂಲಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಆಗಬೇಕಿದೆ ಎಂದು ಅಭ್ಯರ್ಥಿ ಉಷಾ ಜಯರಾಜ್ ಅಭಿಪ್ರಾಯಪಟ್ಟರು.
ಯಾವ ಪುರುಷಾರ್ಥಕ್ಕಾಗಿ ಈ ಪಕ್ಷಗಳ ನಾಯಕರುಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನ್ಯಾಯಸಮ್ಮತ ಚುನಾವಣೆ ನಡೆಸಲು ಇವರಿಗೆ ಸಾಮರ್ಥವಿಲ್ಲವೇ ಎಂದು ಪ್ರಶ್ನಿಸಿದರು. ಹಾಗೂ ಮತದಾರರು ಇಂತಹ ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಚೋಳರಾಜ್, ವೆಂಕಟರಾಮ್, ಮಹದೇವ್, ಪಾದರಾಜ್, ಆಶಾ, ಪದ್ಮಾ, ಮೋಹನ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement