ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ

Lingaraj Badiger
Updated On : 4 May 2013, 11:15 am

ಶಿವಮೊಗ್ಗ: ಹೊಳಲೂರಿನ ಕೆನರಾ ಬ್ಯಾಂಕ್ನ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕುರಿತಂತೆ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಯು 18 ರಿಂದ 40 ವರ್ಷ ವಯೋವುತಿ ಒಳಗಿನವರಾಗಿರಬೇಕು. ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು. 21 ದಿನಗಳ ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ ನೀಡಲಾಗುವುದು. ತರಬೇತಿಯು ಮೇ 14ರಿಂದ ನಡೆಯಲಿದೆ ಎಂದು ಬ್ಯಾಂಕ್ನ ನಿರ್ದೇಶಕರು ತಿಳಿಸಿದ್ದಾರೆ. ವಿವರಗಳಿಗಾಗಿ- 08182-245721.
ಪ್ರತಿಷ್ಠಾಪನೆ ಮಹೋತ್ಸವ
ಶಿವಮೊಗ್ಗ: ಸಾಧುಶೆಟ್ಟಿ ಯುವಕ ಸಂಘ ನಗರದ ದೊಡ್ಡಮ್ಮ ಜಲದುರ್ಗಮ್ಮ ಮತ್ತು ಕೆಂಚರಾಯ ಸ್ವಾಮಿ ದೇವಸ್ಥಾನದಲ್ಲಿ ಮೇ 7ರಂದು ಶ್ರೀ ಸ್ವಾಮಿಯ ಪ್ರತಿಷ್ಠಾಪನೆ ಮಹೋತ್ಸವ ಹಮ್ಮಿಕೊಂಡಿದೆ. ಮೇ 7ರಂದು ದೇವಿಗೆ ಕಲಾತತ್ವ ಹೋಮ, 108 ಅಷ್ಟೋತ್ತರ ಬ್ರಹ್ಮಕುಂಭಾಭಿಷೇಕ ಕಲಶ ಪ್ರತಿಷ್ಠೆ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಮೋಹನ್, ದೇವಾಲಯದ ಆರ್ಚಕ ಪಿ. ಗೋಪಾಲ್ ತಿಳಿಸಿದ್ದಾರೆ.
ಜೆಡಿಎಸ್ಗೆ ಸೇರ್ಪಡೆ
ಶಿವಮೊಗ್ಗ: ಜೆಡಿಎಸ್ನಿಂದ ಕೆಜೆಪಿಗೆ ಸೇರ್ಪಡೆಗೊಂಡಿದ್ದ ಎಚ್.ಕೆ. ಅಬ್ದುಲ್ ವಾಜೀದ್ ಮರಳಿ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಅನೇಕ ಕಾರ್ಯಕರ್ತರೊಂದಿಗೆ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಬರಮಾಡಿಕೊಂಡರು ಎಂದು ಪಕ್ಷ ತಿಳಿಸಿದೆ.
ಜನ ಸಂಗ್ರಾಮ ಪರಿಷತ್ ಬೆಂಬಲ
ಶಿವಮೊಗ್ಗ: ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಟಿ.ಆರ್. ಕೃಷ್ಣಪ್ಪ ಹಾಗೂ ಕಿಮ್ಮನೆ ರತ್ನಾಕರ್ ಅವರನ್ನು ಜನ ಸಂಗ್ರಾಮ ಪರಿಷತ್ ಬೆಂಬಲಿಸಲಿದೆ ಎಂದು ಪರಿಷತ್ ಸಂಚಾಲಕ ರಾಘವೇಂದ್ರ ಕುಷ್ಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಇಬ್ಬರು ನಾಯಕರು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಬೇರೆಲ್ಲ ರಾಜಕಾರಣಿಗಳಿಗಿಂತ ಭಿನ್ನವಾಗಿ ಉತ್ತಮ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂಬಂಧ ಧಾರವಾಡದ ಕೇಂದ್ರ ಕಚೇರಿಯಲ್ಲಿ ಪರಿಷತ್ನ ಸಂಸ್ಥಾಪಕ ಎಸ್.ಆರ್. ಹಿರೇಮಠ ಸೇರಿದಂತೆ ನಿರ್ದೇಶಕರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement