ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೈಪೋಟಿ ನಡುವೆಯೂ ಪಕ್ಷೇತರರ ಪ್ರಚಾರ

Lingaraj Badiger
Updated On : 4 May 2013, 11:21 am

ಕ.ಪ್ರ.ವಾರ್ತೆ,ಸೊರಬ, ಮೇ 3
ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷದವರ ಪೈಪೋಟಿಯ ನಡುವೆಯೂ ಪಕ್ಷೇತರ ಅಭ್ಯರ್ಥಿಗಳು ಕೈಚೆಲ್ಲದೆ ಉತ್ಸಾಹದಿಂದ ಸೊರಬ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಕೆ. ಗುರುಮೂರ್ತಿ ಓಟೂರು ಇವರು ಮನೆಮನೆಗೆ ತೆರಳಿ ಮತಯಾಚಿಸುತ್ತಿದ್ದು, ಬಂಗಾರಪ್ಪ ನಂತರದ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ವಿಡಂಬಿಸಿ, ಪರ್ಯಾಯ ವ್ಯಕ್ತಿಯ ಅವಶ್ಯಕತೆಯನ್ನು ಎತ್ತಿ ತೋರಿಸುತ್ತಿದ್ದಾರೆ.
ಮಾಜಿಗಳು ಮತ್ತು ಕುಟುಂಬದ ಬೆಂಬಲವಿಟ್ಟು ಮತ ಯಾಚಿಸುತ್ತಿರುವವರಿಗೆ ರೈತಾಪಿ ಬದುಕಿನ  ಗಂಧಗಾಳಿಯೇ ಗೊತ್ತಿಲ್ಲ. ಮೆಟ್ರೋ ಸಿಟಿಗೆ ಜೋತುಕೊಂಡಿರುವಂತಹವರಿಂದ ಕೃಷಿಕರ ಏಳಿಗೆ ಅಸಾಧ್ಯ. ಈ ನೆಲದ ಸೊಗಡು, ಮಣ್ಣಿನ ಸಾಂಗತ್ಯ ಇರುವವರು ಮಾತ್ರ ಸಾಮಾಜಿಕ ನ್ಯಾಯ ಕೊಡಬಲ್ಲ. ಆದ್ದರಿಂದ ಕೃಷಿ ಕುಟುಂಬದಿಂದ ಬಂದ ನನ್ನನು ಆಯ್ಕೆಗೊಳಿಸಿ ಎಂದು ಮತ ಕೋರಿದಂರು.
ಜಾನುವಾರು ಅಗತ್ಯ: ಇತ್ತ ತಾಲೂಕು ಗೋ ಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ, ಪಕ್ಷೇತರ ಅಭ್ಯರ್ಥಿ ಜೆ.ಎಸ್.ಚಿದಾನಂದಗೌಡ ಮನೆಯಿಂದಲೇ ಬುತ್ತಿ ತಂದು, ಮಧ್ಯಾಹ್ನದ ವೇಳೆ ಪ್ರಕೃತಿಯ ನಡುವೆ ಊಟ ಮುಗಿಸಿ ಪ್ರಚಾರ ಕಾರ್ಯ ಮುಂದುವರೆಸುತ್ತಿದ್ದಾರೆ. ಕೃಷಿಕನ ಬದುಕಿಗೆ ಅವಶ್ಯವಿರುವ ಜಾನುವಾರಿನ ಅಗತ್ಯತೆ ಕುರಿತಂತೆ, ಇಲ್ಲಿಯವರೆಗೆ ಆಯ್ಕೆಗೊಂಡ ಜನಪ್ರತಿನಿಧಿಗಳಿಂದ ಜನಸಾಮಾನ್ಯರಿಗಾದ ವಂಚನೆಗಳೇನು ಇತ್ಯಾದಿ ವಿಷಯ ವ್ಯಕ್ತಪಡಿಸಿ ಮತ ಯಾಚಿಸುತ್ತಿದ್ದಾರೆ.
ಬಂಡಾಯ ಅಭ್ಯರ್ಥಿ ಭೀಮಪ್ಪ ಮತ್ತು ಗುಡವಿ ಬಸವಣ್ಯಪ್ಪ ಕೂಡ ರೋಡ್ ಶೋ ನಡೆಸಿ, ಮನೆಮನೆಗೆ ತೆರಳಿ ಮತಯಾಚನೆ ಮುಂದುವರೆಸಿದ್ದಾರೆ.
ಬಿಎಸ್ಆರ್ ಕಾಂಗ್ರೆಸ್ ಪ್ರಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಲ್ಲಿ ಸಕ್ರಿಯವಾಗಿದ್ದ ಬಹುತೇಕ ಎಲ್ಲರೂ ಬೇರೆ ಬೇರೆ ಪಕ್ಷಗಳೊಂದಿಗೆ ಬೆರೆತುಕೊಂಡಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಬಾಸೂರು ಚಂದ್ರೇಗೌಡರು, ಬಿಜೆಪಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಶತಾಯಗತಾಯ ಸಿ. ನಾಗರಾಜಗೌಡ ಅವರನ್ನು ಗೆಲ್ಲಿಸಿಯೇ ತೀರುತ್ತೇನೆ ಎಂದು ಶಪಥಗೈದು ಪ್ರಚಾರಕಾರ್ಯದಲ್ಲಿ ಮಗ್ನರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement