ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತಗಟ್ಟೆಗಳ ಬದಲಾವಣೆ

Lingaraj Badiger
Updated On : 4 May 2013, 11:23 am

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಮತಗಟ್ಟೆಗಳನ್ನು ತಾಂತ್ರಿಕ ಕಾರಣಗಳಿಂದಾಗಿ ಸ್ಥಳಾಂತರಿಸಲಾಗಿದೆ. ಮತಗಟ್ಟೆ ಸಂಖ್ಯೆ, ಈ ಹಿಂದೆ ಇದ್ದ ಕಟ್ಟಡ, ಹಾಲಿ ಸ್ಥಳಾಂತರಿಸಿದ ಕಟ್ಟಡ 15. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬೊಮ್ಮನಕಟ್ಟೆ, ಕೊಠಡಿ- ನಂ.3- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಆಶ್ರಯ ಬಡಾವಣೆ, ಎ.ಬ್ಲಾಕ್, ಬೊಮ್ಮನಕಟ್ಟೆ. 17. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ  ಶಾಲೆ, ಸೋಮಿನಕೊಪ್ಪ (ಬಲಭಾಗ), ಕೊಠಡಿ ನಂ.2-ಗ್ಲೋಬಲ್ ಹಿರಿಯ ಪ್ರಾಥಮಿಕ ಮತ್ತು ಆಂಗ್ಲ ಪ್ರೌಢಶಾಲೆ, ಕನಕ ನಗರ.
22. ಚೇತನ ಹಿರಿಯ ಪ್ರಾಥಮಿಕ ಶಾಲೆ, 1ನೇ ಹಂತ ವಿನೋಬನಗರ. ಕೊಠಡಿ ನಂ.3- ಎಂ.ಇ.ಎಸ್. ಕಾನ್ವೆಂಟ್, ವಿನೋಬ ನಗರ ರೂಂ ನಂ.1 ಮತ್ತು 2. 68. ಎಸ್.ಕೆ.ಎನ್. ಮಾಡೆಲ್ ಆಂಗ್ಲಶಾಲೆ ಎಚ್ಐಜಿ 46 ಹುಡ್ಕೋ ಕಾಲೋನಿ, ವಿನೋಬನಗರ- ರಾಯಲ್ ಡೈಮಂಡ್ ಆಂಗ್ಲ ಶಾಲೆ, ಹುಡ್ಕೋ ಕಾಲೋನಿ, ರೂಂ ನಂ.1 ಮತ್ತು 2, ವಿನೋಬನಗರ. 122. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ- ಮಹಾವೀರ ವಿದ್ಯಾಲಯ, ಹಳೇ ಪೋಸ್ಟ್ ಆಫೀಸ್ ರಸ್ತೆ, ರೂಂ ನಂ.1.
123. ರಾ.ನಿ.ಕಸಬಾ ಹೋಬಳಿ ಕೊಠಡಿ ಮ್ಯಾಮ್ ಕೋಸ್ ಕಟ್ಟಡ ಹಳೇ ಬಾರ್ ಲೈನ್ರಸ್ತೆ - ಮಹಾವೀರ ವಿದ್ಯಾಲಯ, ಹಳೇ ಪೋಸ್ಟ್ ಆಫೀಸ್ ರಸ್ತೆ, ರೂಂ ನಂ.2.
150. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಳಘಟ್ಟ ಕೊಠಡಿ ಸಂಖ್ಯೆ 2- ಸರ್ಕಾರಿ ಪ್ರೌಢಶಾಲೆ, ಮಿಳಘಟ್ಟ ರೂಂ ನಂ.1. 152. ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ, ಮಿಳಘಟ್ಟ ಕೊಠಡಿ ಸಂಖ್ಯೆ 4- ಸರ್ಕಾರಿ ಪ್ರೌಢಶಾಲೆ, ಮಿಳಗಟ್ಟ ರೂಂ ನಂ.2.
206. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನ್ಯೂಮಂಡ್ಲಿ- ಆರ್.ಆರ್. ವಿದ್ಯಾಸಂಸ್ಥೆ, ಕೆ.ಆರ್.ವಾಟರ್ ವರ್ಕ್, ನ್ಯೂಮಂಡ್ಲಿ, ರೂಂ ನಂ.1 ಮತಗಟ್ಟೆಗಳ ಬದಲಾವಣೆಯನ್ನು ಸಾರ್ವಜನಿಕರು ಗಮನಿಸಬೇಕೆಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಸ್ವೈ ಪ್ರಚಾರ
ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿಯ ಹುಟ್ಟಡಗಿಸಲು ಇನ್ನಿಲ್ಲದ ಕಾರ್ಯತಂತ್ರ ರೂಪಿಸಿರುವ ಕೆಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ನಗರದಲ್ಲಿ ಬಿರುಸಿನ ಸಂಚಾರ ನಡೆಸಿದರು. ಬಹಿರಂಗ ಪ್ರಚಾರದ ಕೊನೆ ದಿನದಂದೂ ಶಿಕಾರಿಪುರಕ್ಕಿಂತ ಶಿವಮೊಗ್ಗ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟ ಬಿಎಸ್ವೈ, ತಮ್ಮ ಅಭ್ಯರ್ಥಿ ಎಸ್. ರುದ್ರೇಗೌಡ ಪರವಾಗಿ ಭರ್ಜರಿ ರೋಡ್ ಶೋ ನಡೆಸಿದರು.  9 ಗಂಟೆಗೆ ನಗರದ ಎಂಆರ್ಎಸ್ ಬಳಿಗೆ ಬಂದ ಬಿಎಸ್ವೈ ತೆರೆದ ವಾಹನದಲ್ಲಿ ಏರಿ ಅಭಿಮಾನಿಗಳತ್ತ ಕೈಬಿಸಿ, ರೋಡ್ ಶೋಗೆ ಚಾಲನೆ ನೀಡಿದರು. ಬಿಎಚ್ ರಸ್ತೆ ಮೂಲಕ ಹೊರಟ ಮೆರವಣಿಗೆ ಕೋಟೆ ರಸ್ತೆ ಮಾರ್ಗವಾಗಿ ಸೀಗೆಹಟ್ಟಿ, ಓಟಿ ರಸ್ತೆ, ಗೋಪಾಲಗೌಡ ಬಡಾವಣೆ ಮಾರ್ಗವಾಗಿ ಸಾಗಿತು. ರೋಡ್ ಶೋನಲ್ಲಿ ಯಡಿಯೂರಪ್ಪ ಮತದಾರ ಕಡೆ ವಿಜಯದ ಸಂಕೇತದೊಂದಿಗೆ ಕೈ ಬಿಸಿ, ಪಕ್ಷದ ಚಿಹ್ನೆ ತೋರಿಸುತ್ತಾ ಎಸ್. ರುದ್ರೇಗೌಡ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement