ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮನ ತಣಿಸಿದ ಬೇಸಿಗೆ ಶಿಬಿರ

Lingaraj Badiger
Updated On : 4 May 2013, 11:14 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ.3
ಅದು ವಿಶೇಷ ಕಾರ್ಯಕ್ರಮ, ವಿವಿಧ ಕಾಲೇಜು ವಿದ್ಯಾರ್ಥಿಗಳು ಕಟ್ಟಿಕೊಂಡ ನೃತ್ಯ ತಂಡವು ನಗರದ ನೃತ್ಯಾಸಕ್ತ ಮಕ್ಕಳಿಗಾಗಿ ವೇದಿಕೆ ಕಲ್ಪಿಸಿದ ಅಪರೂಪದ ಕಾರ್ಯಕ್ರಮ.
 ನಗರದ ಪೆಸೆಟ್, ಡಿವಿಎಸ್, ಎಟಿಎನ್ಸಿಸಿ ಕಾಲೇಜಿನ ನೃತ್ಯಾಸಕ್ತ ವಿದ್ಯಾರ್ಥಿಗಳು ಒಂದೆಡೆ ಸೇರಿಕೊಂಡು ಸ್ಟೇಪ್ ಹೋಲ್ಡರ್ಸ್ ನೃತ್ಯ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ತಮ್ಮಲ್ಲಿರುವ ಕಲೆಯನ್ನು ಮಕ್ಕಳಿಗೂ ಕಲಿಸುವ ಉದ್ದೇಶದಿಂದ ಕಳೆದ 25 ದಿನಗಳಿಂದ ಬೇಸಿಗೆ ಶಿಬಿರ ಏರ್ಪಡಿಸಿದ್ದರು.
 ನಗರದ ವಿವಿಧ ಬಡಾವಣೆಗಳ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಇದರ ಸಮಾರೋಪ ಹಾಗೂ ತರಬೇತಿ ಪಡೆದ ಮಕ್ಕಳ ಪ್ರದರ್ಶನಕ್ಕಾಗಿ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಇಳಿಹೊತ್ತಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ನ್ಯತ್ಯ ಪ್ರದರ್ಶನ: ಮಕ್ಕಳು ಕಳೆದ 25 ದಿನಗಳಿಂದ ನೃತ್ಯ ತರಬೇತಿ ಶಿಬಿರದಲ್ಲಿ ಕಲಿತ ವಿವಿಧ ಪ್ರಾಕಾರದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
 ಉತ್ತಮ ಪ್ರದರ್ಶನ ನೀಡಿದ ಮಕ್ಕಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಚಿಕ್ಕ ಮಕ್ಕಳ ನೃತ್ಯವಂತೂ ನೋಡುಗರ ಕಣ್ಮನ ಸೆಳೆಯಿತು. ಈ ವೇಳೆ ಎಲ್ಲಾ ಮೊಬೈಲ್ಗಳೂ ಕ್ಲಿಕ್ಕಿಸಲಾರಂಭಿಸಿದವು. ನೆರೆದಿದ್ದ ಪೋಷಕರಿಂದ ಚಪ್ಪಾಳೆ ಹರಿದು ಬಂದವು.
 ಈ ಸಂದಂರ್ಭದಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅರಿವು ಮೂಡಿಸುವ ಮುಕಾಭಿನಯಗಳು, ಜಾಹೀರಾತು ತುಣುಕನ್ನು ತೋರಿಸಲಾಯಿತು. ತರಬೇತುದಾರ ಸುದರ್ಶನ ಹಾಗೂ ಚನ್ನೇಶ್ ಎಸ್. ಆಚಾರ್ ಅವರು ಪಾಪ್ ಗೀತೆಗಳಿಗೆ ನೃತ್ಯ ಹಾಗೂ ನಗರದ ರಾಗಿಗುಡ್ಡದ ಹುಡುಗ ಪರಶುರಾಮ್ ಸಾಹಸ ಕಲೆ ಪ್ರದರ್ಶನ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತು.
ಸೀಮಿತವಾಗಬಾರದು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಟಿಎನ್ಸಿಸಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಜಿ. ರಮೇಶ್, ಮಕ್ಕಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಬಾರದು. ಇಂತಹ ಕಲಾತ್ಮಕ ಶಿಬಿರಗಳಲ್ಲಿಯೂ ಪಾಲ್ಗೊಳ್ಳಬೇಕು. ಆಗ ಮಾತ್ರ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಪ್ರದರ್ಶಿಸಲು ಸಾಧ್ಯ ಎಂದರು.  ಅರುಣ್ ರಾಜ್ ಶೆಟ್ಟಿ ತಂಡ ಸ್ಟೆಪ್ ಹೋಲ್ಡರ್ಸ್ ನೃತ್ಯ ಸಂಸ್ಥೆ ಸ್ಥಾಪಿಸಿ, ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಮಕ್ಕಳಿಗೆ ಶಿಬಿರದ ಮೂಲಕ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರಲ್ಲದೇ, ಇಂತಹ ಶಿಬಿರಗಳನ್ನು ಮತ್ತಷ್ಟು  ಹಮ್ಮಿಕೊಳ್ಳಬೇಕು ಎಂದರು.   ಇಪಿಎಂಎಲ್ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕ ಎಲ್.ಎನ್. ಮೂರ್ತಿ ಮಾತನಾಡಿ, ಕಾಲೇಜು ಯುವಕರಲ್ಲಿ ಇಂತಹ ಆದ್ಭುತ ಪ್ರತಿಭೆ ಹುಟ್ಟಿಕೊಂಡಿರುವುದು ಸಂತಸ ತಂದಿದೆ. ಯುವಶಕ್ತಿ ಒಂದೆಡೆ ಸೇರಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈ ಸಂಸ್ಥೆಯೇ ಸಾಕ್ಷಿ. ಈ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲಿ ಎಂದು ಹಾರೈಸಿದರು.   ಮಣಿಯಣ್ಣ ಸೋಷಿಯಲ್ ವೆಲ್ಫೇರ್ ಟ್ರಸ್ಟ್ನ ಚೇತನ್ ಕುಮಾರ್, ಸ್ಲಿಮ್ಫಿಟ್ ಜಿಮ್ ಮಾಲೀಕ  ದೊರೈ  ಚಿನ್ನಪ್ಪ, ಸ್ನೇಹವಾಹಿನಿ ಸ್ತ್ರೀ ಸ್ವಸಹಾಯ ಸಂಘದ ಚಂದ್ರಕಲಾ, ನಿರಂತರ ಚಾರಿಟಬಲ್ ಟ್ರಸ್ಟ್  ಅಧ್ಯಕ್ಷೆ ಸುಧಾ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement