ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಮತದಾರರೇ ಪ್ರಭುಗಳು

Vishwanath S
Updated On : 5 May 2013, 1:05 am

ಕ.ಪ್ರ.ವಾರ್ತ್ಣೆ , ಶಿವಮೊಗ್ಗ , ಮೇ.4
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎನ್‌ಇಎಸ್ ಕಾಲೇಜು, ಗ್ರಾಮಾಂತರ ಕ್ಷೇತ್ರ- ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಮಸ್ಟರಿಂಗ್- ಡಿ, ಮಸ್ಟರಿಂಗ್ ಕೇಂದ್ರ ತೆರೆಯಲಾಗಿತ್ತು. ಉಳಿದಂತೆ ಸಾಗರ, ಸೊರಬ, ಭದ್ರಾವತಿ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ತಾಲೂಕು ಕೇಂದ್ರಗಳಲ್ಲಿರುವ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಮಸ್ಟರಿಂಗ್-ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ.
  ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಮತಯಂತ್ರ ಸೇರಿದಂತೆ ಚುನಾವಣಾ ಅಗತ್ಯ ವಸ್ತುಗಳೊಂದಿಗೆ ಶನಿವಾರ ಮತಗಟ್ಟೆಗಳಿಗೆ ತೆರಳಿದರು.
ಹಾಜರಾತಿ ನಮೂದು: ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಶನಿವಾರ ಬೆಳಗ್ಗೆ ಮಸ್ಟರಿಂಗ್ - ಡಿ ಮಸ್ಟರಿಂಗ್ ಕೇಂದ್ರಗಳಿಗೆ ಆಗಮಿಸಿದ್ದರು. ತಮ್ಮ ಬೂತ್‌ಗಳಿಗೆ ನಿಯೋಜಿತರಾಗಿರುವ ಇತರೆ ಸಹವರ್ತಿಗಳ ಜೊತೆಗೂಡಿ ಸಂಬಂಧಿಸಿದ ಅಧಿಕಾರಿಗಳ ಬಳಿ ತಮ್ಮ ಹಾಜರಾತಿ ನಮೂದಿಸುತ್ತಿದ್ದರು. ನಂತರ ಮತಯಂತ್ರ ಮತ್ತಿತರ ಚುನಾವಣಾ ಪರಿಕರಗಳನ್ನು ಪಡೆದುಕೊಂಡರು.
 ನಂತರದ ಹಂತದಲ್ಲಿ ಸಿಬ್ಬಂದಿ ತಮಗೆ ನೀಡಲಾಗಿರುವ ಮತಯಂತ್ರ ಸುಸ್ಥಿತಿಯಲ್ಲಿದೆಯೇ, ಸಮರ್ಪಕವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದುದು ಕಂಡುಬಂತು. ಇದರೊಂದಿಗೆ ಮತದಾರರ ನೋಂದಣಿ ಪುಸ್ತಕ, ಮತದಾರರ ಪಟ್ಟಿ, ಶಾಹಿ, ಪೋಸ್ಟರ್, ಮತದಾರರ ಚೀಟಿ, ಸೀಲು ಮೊದಾಲದ ವಸ್ತುಗಳನ್ನು ಪರಿಶೀಲಿಸಿದರು.
 ಚುನಾವಣಾ ಪರಿಕರಗಳ ತಪಾಸಣೆ ನಂತರ ತಮಗೆ ನಿಯೋಜಿತವಾದ ಬೂತ್‌ಗಳಿಗೆ ಬಸ್, ಮಿನಿ ಬಸ್, ಮತ್ತಿತರ ವಾಹನಗಳ ಮೂಲಕ ಸಿಬ್ಬಂದಿ ತಂಡ ತೆರಳಿದರು. ಇದಕ್ಕೂ ಮೊದಲು ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳು ಮತಗಟ್ಟೆ ಸಿಬ್ಬಂದಿಗೆ ಅಗತ್ಯ ಸಲಹೆ- ಸೂಚನೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಚುನಾವಣಾ ಪರಿಕರಗಳು ಸುಸ್ಥಿತಿಯಲ್ಲಿವೆಯೇ ಎಂಬುವುದನ್ನು ಕೂಲಂಕಷವಾಗಿ ತಪಾಸಣೆ ನಡೆಸುವಂತೆ ಸೂಚಿಸಿದರು.
10 ಲೈಂಗಿಕ ಅಲ್ಪಸಂಖ್ಯಾತರು: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ 2,15,845 ಮತದಾರರಿದ್ದು, ಈ ಪೈಕಿ 1,07,948 ಪುರುಷ, 1,07,853 ಮಹಿಳೆ ಹಾಗೂ 10 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.
 ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ 1,58,927 ಮತದಾರರಿದ್ದು, 94,479 ಪುರುಷ, 91,441 ಮಹಿಳೆ, 7 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ 1,99,043 ಮತದಾರರಿದ್ದಾರೆ. ಇದರಲ್ಲಿ 98,791 ಪುರುಷ, 1,00,248 ಮಹಿಳಾ, 4 ಲೈಂಗಿಕ ಅಲ್ಪಸಂಖ್ಯಾತ ಮತದಾರರು.
 ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,69,716 ಮತದಾರರಿದ್ದು, 84,983 ಪುರುಷ, 84,729 ಮಹಿಳಾ ಹಾಗೂ 4 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ 1,72,702 ಮತದಾರರಿದ್ದು, 88,061 ಪುರುಷ, 84,627 ಮಹಿಳೆ, 14 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಸೊರಬ ಕ್ಷೇತ್ರದಲ್ಲಿ 1,71,994 ಮತದಾರರಿದ್ದು, 88,179 ಪುರುಷ, 83,811 ಮಹಿಳೆ, 4 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಸಾಗರ ಕ್ಷೇತ್ರದಲ್ಲಿ 1,79,683 ಮತದಾರರಲ್ಲಿ 89,939 ಪುರುಷ, 89,740 ಮಹಿಳೆ, 4 ಲೈಂಗಿಕ ಅಲ್ಪಸಂಖ್ಯಾತ ಮತದಾರರು.
7ಕ್ಕೆ ಆರಂಭ, 247 ಸೂಕ್ಷ್ಮ ಮತಗಟ್ಟೆ: ಚುನಾವಣೆ ಬೆಳಗ್ಗೆ 7ಗಂಟೆಗೆ ಆರಂಭವೋ, ಅಥವಾ 8ಕ್ಕೋ ಎಂಬ ಗೊಂದಲಕ್ಕೆ ಈಗಾಗಲೇ ತೆರೆ ಬಿದ್ದಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಮತದಾನಕ್ಕೆ ಯಂತ್ರ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
 ಮತಯಂತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷ ಕಂಡುಬಂದರೆ, ತಕ್ಷಣವೇ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಪರ್ಯಾಯ ಮತಯಂತ್ರ ಬಳಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಅತೀ ಹೆಚ್ಚು ಮತದಾರರಿರುವ ಹಾಗೂ ಕಡಿಮೆ ಮತದಾರರಿರುವ ಬೂತ್ ವಿವರವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಜಿಲ್ಲೆಯ ಒಟ್ಟಾರೆ ಅಂಕಿ ಅಂಶದಂತೆ ಸಾಗರ ವಿಧಾನಸಭಾ ಕ್ಷೇತ್ರದ ಪಾರ್ಟ್ ಸಂಖ್ಯೆ 243ರಲ್ಲಿ ಅತ್ಯಂತ ಕಡಮೆ ಅಂದರೆ 77 ಮತದಾರರಿದ್ದಾರೆ.
 ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾರ್ಟ್ ಸಂಖ್ಯೆ 169ರಲ್ಲಿ ಅತ್ಯಂತ ಹೆಚ್ಚು ಅಂದರೆ 1860 ಮತದಾರರಿದ್ದಾರೆ.
 ಕಡಿಮೆ ಮತದಾರರನ್ನು ಹೊಂದಿರುವ ಪಾರ್ಟ್‌ಗಳೆಂದರೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪಾರ್ಟ್ ಸಂಖ್ಯೆ 1ರಲ್ಲಿ 462 ಮತದಾರರಿದ್ದಾರೆ.
 ಭದ್ರಾವತಿ ಪಾರ್ಟ್ ನಂ.10ರಲ್ಲಿ 108, ಶಿವಮೊಗ್ಗ ನಗರ ಪಾರ್ಟ್ ನಂ.99ರಲ್ಲಿ 357, ತೀರ್ಥಹಳ್ಳಿ ಪಾರ್ಟ್ ನಂ.62ರಲ್ಲಿ 105, ಶಿಕಾರಿಪುರ ಪಾರ್ಟ್ ನಂ. 196ರಲ್ಲಿ 296, ಸೊರಬ ಪಾರ್ಟ್ ನಂ.155ರಲ್ಲಿ 368 ಹಾಗೂ ಸಾಗರ ಕ್ಷೇತ್ರದ ಪಾರ್ಟ್ ಸಂಖ್ಯೆ 234ರಲ್ಲಿ  77 ಮತದಾರರಿದ್ದಾರೆ. ಅತಿ ಹೆಚ್ಚಿನ ಮತದಾರರನ್ನು ಹೊಂದಿರುವ ಪಾರ್ಟ್‌ಗಳೆಂದರೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪಾರ್ಟ್ ಸಂಖ್ಯೆ 173ರಲ್ಲಿ 1386 ಮತದಾರರಿದ್ದಾರೆ. ಭದ್ರಾವತಿ ಪಾರ್ಟ್ ನಂ. 108ರಲ್ಲಿ 1528, ಶಿವಮೊಗ್ಗ ನಗರ ಪಾರ್ಟ್ ನಂ.169ರಲ್ಲಿ  1860, ತೀರ್ಥಹಳ್ಳಿ ಪಾರ್ಟ್ ನಂ.174ರಲ್ಲಿ 1449, ಶಿಕಾರಿಪುರ ಪಾರ್ಟ್ ನಂ.166ರಲ್ಲಿ 1612, ಸೊರಬದ ಪಾರ್ಟ್ ನಂ.137ರಲ್ಲಿ 1489 ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಪಾರ್ಟ್ ಸಂಖ್ಯೆ 75ರಲ್ಲಿ 1579 ಮತದಾರರಿದ್ದಾರೆ.
7168 ಸಿಬ್ಬಂದಿ ನೇಮಕ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು 1,605 ಬೂತ್ ಸ್ಥಾಪಿಸಿದ್ದು, 7,168 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.
 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಒಟ್ಟು 230 ಬೂತ್‌ಗೆ 1,054 ಸಿಬ್ಬಂದಿ ನೇಮಿಸಿದ್ದು, 281 ಪಿಆರ್‌ಒ, 320 ಎಪಿಆರ್‌ಒ, 453 ಪಿಒಗಳಿದ್ದಾರೆ.  
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟೆಯಿದ್ದು, 880 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
  ಇದರಲ್ಲಿ 195 ಪಿಆರ್‌ಒ, 215 ಎಪಿಆರ್‌ಒ, 470 ಪಿಒ. ಭದ್ರಾವತಿ ಕ್ಷೇತ್ರದಲ್ಲಿ 239 ಮತಗಟ್ಟೆಯಿದ್ದು, 249 ಪಿಆರ್‌ಒ, 279 ಎಪಿಆರ್‌ಒ, 711 ಪಿಒ ಸೇರಿದಂತೆ 1239 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ.
246 ಬೂತ್: ತೀರ್ಥಹಳ್ಳಿ ಕ್ಷೇತ್ರದ 246 ಬೂತ್‌ಗಳಿಗೆ 991 ಸಿಬ್ಬಂದಿ ನಿಯೋಜಿಸಲಾಗಿದ್ದು, 268 ಪಿಆರ್‌ಒ, 365 ಎಪಿಆರ್‌ಒ, 358 ಪಿಒಗಳಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿನ 211 ಬೂತ್‌ಗಳಿಗೆ 854 ಸಿಬ್ಬಂದಿ ನೇಮಿಸಿದ್ದು, 234 ಪಿಆರ್‌ಒ, 129 ಎಪಿಆರ್‌ಒ, 491 ಪಿಒಗಳಿದ್ದಾರೆ. ಸೊರಬ ಕ್ಷೇತ್ರದ 215 ಬೂತ್‌ಗಳಿಗೆ 932 ಸಿಬ್ಬಂದಿ ನೇಮಿಸಲಾಗಿದ್ದು, 244 ಪಿಆರ್‌ಒ, 197 ಎಪಿಆರ್‌ಒ, 491 ಪಿಒಗಳಿದ್ದಾರೆ.
 ಉಳಿದಂತೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 236 ಮತಗಟ್ಟೆಗಳಿದ್ದು 1218 ಸಿಬ್ಬಂದಿ ನೇಮಿಸಲಾಗಿದೆ. ಇದರಲ್ಲಿ 321 ಪಿಆರ್‌ಓ, 287 ಎಪಿಆರ್‌ಓ, 610 ಪಿಓ ಹಂತದ ಅಧಿಕಾರಿಗಳಾಗಿದ್ದಾರೆ. ಒಟ್ಟು ಏಳು ಕ್ಷೇತ್ರಗಳಿಂದ ತಲಾ 1792 ಪಿಆರ್‌ಓ, ಎಪಿಆರ್‌ಓ, 3584 ಪಿಓ ಹಂತದ ಸಿಬ್ಬಂದಿಯನ್ನು ನೇಮಿಸಲಾಗಿದೆ.
12.94 ಲಕ್ಷ ಮತದಾರ
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ ಸಂಗತಿ. ಉಳಿದಂತೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿದ್ದು, ತೀರ್ಥಹಳ್ಳಿಯಲ್ಲಿ ಕಡಿಮೆ ಮತದಾರರಿದ್ದಾರೆ.
 ಈ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟಾರೆ 12,94,989 (ಏಪ್ರಿಲ್ ಮಾಹೆಯ ಪರಿಷ್ಕೃತ ಪಟ್ಟಿಯ ಪ್ರಕಾರ) ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ 6,52,447 ಪುರುಷ, 6,42,495 ಮಹಿಳೆ ಹಾಗೂ 47 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.
500ಕ್ಕೂ ಹೆಚ್ಚು ವಾಹನ
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ 237 ಬಸ್ಸು, 22 ಮಿನಿ ಬಸ್ಸು, 234 ಜೀಪು, 5 ಕಾರು, 5 ಲಾರಿ, 2 ಲಾಂಚ್, 1 ದೋಣಿಯನ್ನೂ ಕೂಡ ಬಳಸಿಕೊಳ್ಳಲಾಗುತ್ತಿದೆ. ಶರಾವತಿ ಹಿನ್ನೀರು ಪ್ರದೇಶವಿರುವ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 2 ಲಾಂಚ್ ಹಾಗೂ ಒಂದು ದೋಣಿಯನ್ನು ಬಳಸಿಕೊಳ್ಳಲಾಗುತ್ತಿದೆ. ಉಳಿದಂತೆ ಶಿವಮೊಗ್ಗ  ನಗರ, ಗ್ರಾಮಾಂತರ, ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಲಾರಿಗಳನ್ನು ಹಾಗೂ ಶಿವಮೊಗ್ಗ ನಗರದಲ್ಲಿ ಕಾರುಗಳನ್ನು ಕೂಡ ಚುನಾವಣಾ ಉದ್ದೇಶಕ್ಕೆ ಬಳಸಲಾಗುತ್ತಿದೆ.
1,605 ಮತಗಟ್ಟೆ
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟಾರೆ 1,605 ಮತಗಟ್ಟೆಗಳಿದ್ದು 247 ಅತಿ ಸೂಕ್ಷ್ಮ, 467 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಉಳಿದ 891 ಸಾಮಾನ್ಯ ಮತಗಟ್ಟೆಗಳಾಗಿವೆ. ಅತೀ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement