ಓಟರ್ ಸ್ಲಿಪ್ ಇದ್ದರೆ ಬೇರೆ ಗುರುತು ಬೇಕಿಲ್ಲ
ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮತ ಸ್ಲಿಪ್ಗಳನ್ನು ವಿತರಿಸಲು ಮುಂದಾಗಿದ್ದು, ಬಹುತೇಕ ಮತದಾರರಿಗೆ ಇವು ತಲುಪಿಲ್ಲ. ಇನ್ನು ರಾಜಕೀಯ ಪಕ್ಷಗಳೂ ಸಹ ಮತ ಸ್ಲಿಪ್ ವಿತರಿಸುತ್ತಿವೆ.
ಚುನಾವಣಾ ಆಯೋಗವು ವಿತರಿಸುವ ಓಟರ್ ಸ್ಲಿಪ್ನಲ್ಲಿ ಮತದಾರರ ಭಾವಚಿತ್ರವೂ ಇರುತ್ತದೆ. ಈ ಸ್ಲಿಪ್ ಇದ್ದರೆ ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ಯಾವ ಗುರುತಿನ ಪತ್ರವನ್ನೂ ತೋರಿಸುವುದು ಬೇಡ. ಓಟರ್ ಸ್ಲಿಪ್ ಇಲ್ಲದಿದ್ದರೆ ಚುನಾವಣಾ ಆಯೋಗವು ಪರ್ಯಾಯವಾಗಿ ಸೂಚಿಸಿರುವ 23 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿದರೂ ಸಾಕು. ಆದರೆ ಮತಪಟ್ಟಿಯಲ್ಲಿ ಮತದಾರರ ಹೆಸರು ಇರಲೇಬೇಕು.
ಮತದಾರರು ತೋರಿಸಬಹುದಾದ ದಾಖಲೆಗಳ ಪಟ್ಟಿ ಹೀಗಿದೆ.
ಮತದಾರರ ಗುರುತಿನ ಚೀಟಿ
ಪಾಸ್ಪೋರ್ಟ್
ವಾಹನ ಚಾಲನ ಪರವಾನಗಿ ಪತ್ರ
ಪಾನ್ ಕಾರ್ಡ್
ನೌಕರರ ಗುರುತಿನ ಚೀಟಿ
ಬ್ಯಾಂಕ್ ಖಾತೆ ಪುಸ್ತಕ
ಕಿಸಾನ್ ಕಾರ್ಡ್
ವಿದ್ಯಾರ್ಥಿಗಳಿಗೆ ಕಾಲೇಜುಗಳು ನೀಡುವ ಗುರುತಿನ ಚೀಟಿ
ಭಾವಚಿತ್ರವಿರುವ ಜಮೀನಿನ ಪಟ್ಟಾ
ನೋಂದಣಿಯಾದ ಡೀಡ್
ಭಾವಚಿತ್ರವಿರುವ ಪಡಿತರ ಚೀಟಿ
- ಭಾವಚಿತ್ರವಿರುವ ಜಾತಿ ಪ್ರಮಾಣಪತ್ರ
ಮಾಜಿ ಸೈನಿಕರ, ವಯೋವೃದ್ಧ, ವಿಧವಾ ಪಿಂಚಣಿ ಪುಸ್ತಕ
ಸ್ವತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ
ಶಸ್ತ್ರ ಪರವಾನಗಿ ಪತ್ರ
ಮಾಜಿ ಸೈನಿಕರ ಸಿಎಸ್ಡಿ ಕ್ಯಾಂಟೀನ್ ಕಾರ್ಡ್
ಅಂಗವಿಕಲರ ಪ್ರಮಾಣ ಪತ್ರ
ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರ
ಉದ್ಯೋಗಖಾತ್ರಿ ಗುರುತಿನ ಚೀಟಿ
ಯಶಸ್ವಿನಿ ಕಾರ್ಡ್
ನಗರ. ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡಿರುವ ಗುರುತಿನ ಚೀಟಿ
ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮಾ ಪ್ರಮಾಣ ಪತ್ರ
ಆರ್ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
ಆಧಾರ ಕಾರ್ಡ್