'ಬಣ್ಣದ ತೋಟ' ರಂಗ ಶಿಬಿರ
ಶಿವಮೊಗ್ಗ: ಬಣ್ಣ ಸಾಮಾಜಿಕ, ಶೈಕ್ಷಣಿಕಾಭಿವೃದ್ಧಿ ಸಂಸ್ಥೆ, ಮದರ್ ಸಂಸ್ಥೆ ಆಶ್ರಯದಲ್ಲಿ ತಾಯಿಮನೆ ನಿರ್ಗತಿಕ ಹಾಗೂ ಅನಾಥ ಮಕ್ಕಳ ಆಶ್ರಮದಲ್ಲಿ 'ಬಣ್ಣದ ತೋಟ' ಎಂಬ ಬೇಸಿಗೆ ರಂಗ ಶಿಬಿರ ಆಯೋಜಿಸಲಾಗಿತ್ತು.
ಅನಾಥ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಶಿಬಿರ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಸಮುದಾಯದ ಮುಖ್ಯಸ್ಥ ಲಕ್ಷ್ಮೀನಾರಾಯಣ, ರಂಗ ನಿರ್ದೇಶಕ ಟಿ. ಮನು, ಕಿರಣ್ಕುಮಾರ್ ಕೆ. ಮಾರಶೆಟ್ಟಿಹಳ್ಳಿ, ಚೇತನ್ಕುಮಾರ್, ಸಿ. ರಾಯನಹಳ್ಳಿ, ಅಜಯ್ಸಿಂಹ, ಕೆ.ವಿ. ಸತೀಶ್ಕುಮಾರ್ ಸೂಗೂರು ಮತ್ತು ಬಣ್ಣ ಸಂಸ್ಥೆಯ ಅಧ್ಯಕ್ಷ ರಾಜೇಶ್ ಎಸ್. ಸಾಂತವೇರಿ, ಕಾರ್ಯದರ್ಶಿ ಕೆ.ಆರ್. ಪ್ರಮೀಣ್, ಖಜಾಂಚಿ ಆರ್. ಮಂಜುನಾಥ, ಮದರ್ ಸಂಸ್ಥೆ ಕಾರ್ಯದರ್ಶಿ ಸುದರ್ಶನ ಹಾಗೂ ಸಂಸ್ಥೆಯ ಸದಸ್ಯ ಪ್ರಿನ್ಸ್ ರಂಗನಾಥ, ಮುರಳಿ, ನಿತೀಶ ಮತ್ತಿತರರು ಇದ್ದರು.