ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರ ವಿಧಾನಸಭಾ ಕ್ಷೇತ್ರ: 1,79685 ಮತದಾರರು

Vishwanath S
Updated On : 5 May 2013, 1:03 am

ಸಾಗರ: ಹೊಸನಗರ ತಾಲ್ಲೂಕಿನ ಎರಡು ಹೋಬಳಿ ಸೇರಿದಂತೆ ಸಾಗರ ವಿಧಾನಸಭಾ ಕ್ಷೇತ್ರದ 179685 ಮತದಾರರು ಭಾನುವಾರ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ. ಇದರಲ್ಲಿ ಮಹಿಳಾ ಮತದಾರರು ಸರಿಸುಮಾರು ಅರ್ಧದಷ್ಟಿರುವುದು ಕ್ಷೇತ್ರದ ವಿಶೇಷ. ಇಲ್ಲಿ 89939 ಪುರುಷರಿದ್ದರೆ 89742 ಮಹಿಳೆಯರು ಇದ್ದಾರೆ.
 ಶಾಂತಿಯುತ ಮತದಾನಕ್ಕಾಗಿ ರಕ್ಷಣಾ ಇಲಾಖೆ, ಹೋಂಗಾರ್ಡ್, ಅರೆ ಸೇನಾಪಡೆ, ಹಾಗೂ ಮತಗಟ್ಟೆ ಇತರೆ ಸಿಬ್ಬಂದಿಗಳು ಸೇರಿದಂತೆ 1200ಕ್ಕೂ ಹೆಚ್ಚು ಜನ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆದ ಉಪವಿಭಾಗಾಧಿಕಾರಿ ಡಾ. ಬಿ.ಉದಯಕುಮಾರ ಶೆಟ್ಟಿ ಹೇಳಿದರು.
ಸುಂಕದಮನೆ ಮತಗಟ್ಟೆ: ಶರಾವತಿ ಹಿನ್ನೀರಿನಲ್ಲಿ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಸುಂಕದಮನೆಯಲ್ಲಿ ಇದೇ ಪ್ರಥಮಬಾರಿಗೆ ಮತಗಟ್ಟೆ ಸ್ಥಾಪಿಸಿರುವುದು ಈ ಬಾರಿಯ ವಿಶೇಷ ಎಂದು ಹೇಳಿರುವ ಚುನಾವಣಾಧಿಕಾರಿಗಳು ಸಿಬ್ಬಂದಿಗಳಿಗಾಗಿ ವಿಶೇಷ ಲಾಂಚ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಮತದಾರರು ದೂರದ ಮತಗಟ್ಟೆಗೆ ತೆರಳುವುದನ್ನು ತಪ್ಪಿಸಲಾಗಿದೆ.   ಇದೇ ರೀತಿ ಕ್ಷೇತ್ರದ ಸೂಕ್ಷ್ಮ ಪ್ರದೇಶಗಳಾದ ಆರ್ಕಳ, ಕರೂರು, ಸಂಕಣ್ಣ ಶಾನುಭೋಗ, ಮರಾಠಿ, ಚದರವಳ್ಳಿ, ಬ್ಯಾಕೋಡ ಮುಂತಾದ ಪ್ರದೇಶಗಳಲ್ಲಿ ಹೆಚ್ಚಿನ ರಕ್ಷಣಾ ಸಿಬ್ಬಂದಿ ನೇಮಕಮಾಡಿದ್ದು ಸುಲಲಿತ ಮತದಾನದ ವ್ಯವಸ್ಥೆಗಾಗಿ 34 ಬಸ್ಸು ಹಾಗೂ 43 ಜೀಪಗಳನ್ನೂ ಬಳಸಿಕೊಳ್ಳಲಾಗಿದೆ. ಇದರಲ್ಲಿ ಮಾದರಿ ನೀತಿ ಸಂಹಿತೆ ಉಸ್ತುವಾರಿಗೆ ಏಳು ವಾಹನ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಾಗರ ತಹಶೀಲ್ದಾರ ರಾಜಣ್ಣ, ಹೊಸನಗರ ತಹಶೀಲ್ದಾರ ಅರ್ಚನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement