ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾನ: ಕಟ್ಟೆಚ್ಚರ

Lingaraj Badiger
Updated On : 6 May 2013, 11:06 am

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿನ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಭಾರಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದ್ದು, ಸೀಗೆಹಟ್ಟಿ, ಕ್ಲಾರ್ಕ್ ಪೇಟೆ ಹಾಗೂ ಓಟಿ ರಸ್ತೆಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆಗಳ ಬಳಿ ಕಟ್ಟೆಚ್ಚರ ವಹಿಸಲಾಗಿತ್ತು.
ಮತ ಕೇಂದ್ರಯಿಂದ 200 ವೀಟರ್ ದೂರದವರೆಗೆ ಯಾವುದೇ ವಾಹನ ಅಥವಾ ಮತದಾರಲ್ಲದ ವ್ಯಕ್ತಿಗಳು ನಿಲ್ಲುವಂತಿರಲಿಲ್ಲ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಭಾಗಗಳಲ್ಲಿ ಕೆಲ ವಿಷಯಗಳಿಗೆ ಗೊಂದಲ ಏರ್ಪಟ್ಟಿದರಿಂದ ಈ ಬಾರಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಶೇ.80 ಮತದಾನ
ಸೊರಬ: ತಾಲೂಕಿನ ಎಲಿವಾಳ ಗ್ರಾಮದ 45ನೇ ಮತಗಟ್ಟೆ, ಆನವಟ್ಟಿ 42ನೇ ಮತಗಟ್ಟೆ, ಹಳೇಸೊರಬ 125ನೇ ಮತಗಟ್ಟೆ, ಶಿಗ್ಗಾ ಗ್ರಾಮದ 162ನೇ ಮತಗಟ್ಟೆಯಲ್ಲಿ, ಸಾಗರ ತಾಲೂಕು ಸೈದೂರು ಗ್ರಾಮದ 170ನೇ ಮತಗಟ್ಟೆ, ಸೊರಬ 143ರ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡುಬಂದಿದ್ದು, ಕೂಡಲೇ ಯಂತ್ರ ಬದಲಾಯಿಸಲಾಯಿತು.  ಸಂಜೆ 6ರ ಹೊತ್ತಿಗೆ ಅಂದಾಜು ಶೇ.69 ಮತದಾನವಾಗಿರುವ ಬಗ್ಗೆ ಮಾಹಿತಿ ದೊರಕಿದೆ.
ಶೇ. 69 ಮತದಾನ
ಶಿರಾಳಕೊಪ್ಪ: ಪಟ್ಟಣದಲ್ಲಿ ಚುನಾವಣೆ ಶಾಂತರೀತಿಯಿಂದ ನಡೆದಿದ್ದು, ಶೇ.69ರಷ್ಟು ಮತದಾನವಾಗಿದೆ. ಬೆಳಗ್ಗೆ ಪ್ರಾರಂಭದಲ್ಲಿ ಮಂದಗತಿಯಲ್ಲಿ ಇದ್ದ ಮತದಾನ ಮಧ್ಯಾಹ್ನದ ನಂತರ ಬಿರುಸುಗೊಂಡಿತು.
ಪ್ರತಿಬಾರಿ ಒಂದಲ್ಲಾ ಒಂದು ಗಲಾಟೆ ಆಗುತ್ತಿದ್ದ ಪಟ್ಟಣದಲ್ಲಿ ಈ ಬಾರಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಕೆಜೆಪಿ ಅತ್ಯಧಿಕ ಸ್ಥಾನ ಗೆಲ್ಲಲಿದೆ
ತರೀಕೆರೆ: ಕರ್ನಾಟಕ ಜನತಾ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳು ದೊರಕುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ತಮ್ಮ ಗೆಲವು ನಿಶ್ಚಿತ, ಕೆಜೆಪಿಗೆ ಅತ್ಯಧಿಕ ಸ್ಥಾನಗಳು ದೊರಕಲಿದೆ ಎಂದು ತಿಳಿಸಿದರು.
ಅಭಿಮಾನಿಗಳು ನೀಡಿದ ಪುಷ್ಪಾಹಾರ ಸ್ವೀಕರಿಸಿ ಮಾತನಾಡಿದ ಅವರು, ಉತ್ಸಾಹದಿಂದ ಕೆಲಸ ಮಾಡಿ ಕೆಜೆಪಿ ಅತ್ಯಧಿಕ ಸ್ಥಾನಗಳನ್ನು ಖಂಡಿತ ಎಂದು ಹೇಳಿದರು.
ಪೊಲೀಸರ ಮೇಲೆ ಹಲ್ಲೆಗೆ ಯತ್ನ
ಚಿಕ್ಕಮಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ. ಲಕ್ಕವಳ್ಳಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಸಚಿನ್‌ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಮಂಜನಾಯ್ಕ್ ಎಂಬುವವರು 10.50ರ ವೇಳೆಗೆ ಮತಗಟ್ಟೆಯ ಬಳಿ ಪಾನಮತ್ತರಾಗಿ ಬಂದು ಮತದಾನಕ್ಕೆ ಬರುವವರಿಗೆ ಮನಸ್ಸಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement