ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ ಧರ್ಮ ಸಮ್ಮೇಳನ

Lingaraj Badiger
Updated On : 7 May 2013, 10:48 am

ಕ.ಪ್ರ.ವಾರ್ತೆ, ಸೊರಬ,  ಮೇ 6
ತಾಲೂಕಿನ ಜಡೆ ಗ್ರಾಮದ ಹಿರೇಮಠದಲ್ಲಿ ಮಂಗಳವಾರದಿಂದ ಅಮರೇಶ್ವರ ದೇಶಿಕರ  ಗುರುಪಟ್ಟಾಧಿಕಾರ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ, ಜಂಗಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗೊಗ್ಗೆಹಳ್ಳಿ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಶ್ರೀ ತಿಳಿಸಿದರು.
 ಜಡೆ ಗ್ರಾಮದ ಹಿರೇಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಭಾಪುರಿ ಪೀಠದ ಶ್ರೀಗಳು ಜಂಗಮೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತೊಗರ್ಸಿ ಮಳೆ ಹಿರೇಮಠದ ಶಿವಾಚಾರ್ಯ ಶ್ರೀ  ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಗೊಗ್ಗೆಹಳ್ಳಿ ಶಿವಾನಂದ ಶ್ರೀ ಉಪದೇಶಾಮೃತ ನೀಡಲಿದ್ದಾರೆ.
ನುಡಿ ನೈವೇದ್ಯ: ಶಾಂತಾಪುರ ಮಠದ ಶ್ರೀಗಳು ಭಾಗವಹಿಸಲಿದ್ದು, ಗುರು ನಂಜೇಶ್ವರ ಮಠ, ಕೂಡಲದ  ಅಧ್ಯಕ್ಷತೆ ವಹಿಸಲಿದ್ದಾರೆ. ಜಡೆ ಹಿರೇಮಠದ ಅಮರೇಶ್ವರ ದೇಶಿಕರರವರು ನುಡಿ ನೈವೇದ್ಯ ನೇರವೇರಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ತಿಪ್ಪಣ್ಣ, ಶಿವಮೊಗ್ಗ ಘಟಕದ ಅಧ್ಯಕ್ಷ ರುದ್ರಮೂರ್ತಿ ಸಜ್ಜನ್, ಸಾಗರ ಘಟಕದ ಅಧ್ಯಕ್ಷ ಯು.ಸಿ. ಸಿದ್ದಲಿಂಗೇಶ್, ಸೊರಬ ಘಟಕದ ಅಧ್ಯಕ್ಷ  ಇಂದೂಧರ ಒಡೆಯರ್, ಸೊರಬ ನಗರ ವೀರಶೈವ ಸಮಾಜದ ಗುತ್ತಿ ಚೆನ್ನಬಸಪ್ಪ ಭಾಗವಹಿಸಲಿದ್ದಾರೆ.
ಉಪನ್ಯಾಸ, ಪ್ರವಚನ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೋಪಟ್ ರಾವ್ ಪವಾರ್ ಮಹಾರಾಷ್ಟ್ರ, ಸೊಲ್ಲಾಪುರದ ಆಯುರ್ವೇದ ವೈದ್ಯ ಡಾ. ಶಿವರತ್ನ ಶೇಠೆ, ಧಾರವಾಡ ಕೃಷಿ ವಿವಿ ಕುಲಪತಿ ಆರ್.ಆರ್. ಹಂಚಿನಾಳ್, ಗದಗ ಪಂಡಿತ ಎಂ. ಕಲ್ಲಿನಾಥಶಾಸ್ತ್ರಿಗಳು ಮೊದಲಾದವರಿಂದ ಉಪನ್ಯಾಸ, ಪ್ರವಚನ, ಕೀರ್ತನೆನಗಳು ನಡೆಯಲಿವೆ.
8ರಿಂದ 14 ರವರೆಗೆ  ಪ್ರತಿದಿನ ಪ್ರವಚನ, ಸಂಗೀತ, ಸನ್ಮಾನ ಮೊದಲಾದ ಕಾರ್ಯಕ್ರಮ, 15ರಂದು ಮೌನ ತಪಸ್ವಿ ಜಡೆಯ ಶಾಂತಲಿಂಗ ಶ್ರೀಗಳ ಗುರುವಂದನಾ ಸಮಾರಂಭ, 16ಕ್ಕೆ ಅಮರೇಶ್ವರ ದೇಶಿಕರ ಅವರ ಗುರುಪಟ್ಟಾಭಿಷೇಕ ನಡೆಯುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement