ಕರಾಟೆಯಲ್ಲಿ ಉತ್ತಮ ಸಾಧನೆ
ಶಿವಮೊಗ್ಗ: ಬೆಂಗಳೂರಿನ ಜಯಕರ್ನಾಟಕ ಸಂಘಟನೆ ಮತ್ತು ಯೂನಿವರ್ಸನ್ ಮಾರ್ಷಲ್ ಆರ್ಟ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ವಾಡೋ ರಿಯು ಕರಾಟೆ ಡೋ ಫೇಡರೇಷನ್ ಆಫ್ ಇಂಡಿಯಾ ಸಂಸ್ಥೆ ವಿದ್ಯಾರ್ಥಿಗಳು ವಿಜೇತರಾಗಿದ್ದು, ನಗರದ ಸಹಕಾರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರಾಟೆ ಪಟುಗಳು ಬಹುಮಾನ ಪಡೆದರು.
ಬಾಲಕ, ಬಾಲಕಿಯರ ವಿಭಾಗದಲ್ಲಿ (ಕಟಾ ಮತ್ತು ಫೈಟಿಂಗ್) ಸಂಸ್ಥೆಯ ಸೆನ್ಸೈ ಸಂದೀಪ್ ಕುಮಾರ್ ನೇತೃತ್ವದ ತಂಡ ಮೂರು ಚಿನ್ನ ಸೇರಿದಂತೆ 5 ಬೆಳ್ಳಿ, ನಾಲ್ಕು ಕಂಚಿನ ಪದಕಗಳನ್ನು ಗಳಿಸಿತ್ತು.
ಬಾಲಕರ ವಿಭಾಗದಲ್ಲಿ ಎಂ. ಸುಖಿತ್ (ಪ್ರಥಮ ಮತ್ತು ದ್ವಿತೀಯ ಸ್ಥಾನ), ಟಿ.ಎಸ್. ಭರತ್ರಾಜ್ (ಪ್ರಥಮ ಮತ್ತು ದ್ವಿತೀಯ), ವಿಜಯ್ಕುಮಾರ್ ದ್ವಿತೀಯ), ಟಿ.ಎಸ್. ನಿತಿನ್ ಚಕ್ರವರ್ತಿ(ದ್ವಿತೀಯ ಮತ್ತು ತೃತೀಯ), ಕೆ. ಪ್ರಶಾಂತ್ (ದ್ವಿತೀಯ), ಆರ್. ಪ್ರವೀಣ್ಕುಮಾರ್ (ತೃತೀಯ).
ಬಾಲಕಿಯರ ವಿಭಾಗದಲ್ಲಿ ಎಚ್.ಎಸ್. ಸದಾಕೃತಿ (ಪ್ರಥಮ ಮತ್ತು ತೃತೀಯ) ಪದಕಗಳನ್ನು ಪಡೆದಿದ್ದಾರೆ ಎಂದು ಸಂಸ್ಥೆಯ ಜಿ. ಶಿಹಾನ್ ಚಂದ್ರಕಾಂತ್ ತಿಳಿಸಿದ್ದಾರೆ.