ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಸ್‌ಎಸ್‌ಎಲ್‌ಸಿ: ಸಾಗರ ತಾಲೂಕಿಗೆ ಶೇ.77.68 ಫಲಿತಾಂಶ

Vishwanath S
Updated On : 8 May 2013, 4:48 am

ಕ.ಪ್ರ.ವಾರ್ತೆ ,  ಸಾಗರ ,   ಮೇ 7
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಗರ ತಾಲೂಕು ಶೇ.77.68 ಫಲಿತಾಂಶ ದಾಖಲಿಸಿದ್ದು, ಒಂದು ಸರ್ಕಾರಿ ಶಾಲೆ ಸೇರಿದಂತೆ 5 ಪ್ರೌಢಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.
ಎಂಜಿಎನ್ ಪೈ ಪ್ರೌಢಶಾಲೆ ವಿದ್ಯಾರ್ಥಿ ಶಶಾಂಕ್ ಎಚ್.ಎ. ಶೇ.97.28 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದರೆ, ಪ್ರಗತಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿನಿ ಶುಭಾ ವಿ. ಜೋಯ್ಸ್ ಶೇ. 97.12 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕೆಳದಿಯ ಮೊರಾರ್ಜಿ ವಸತಿ ಪ್ರೌಢಶಾಲೆ, ಪಟ್ಟಣದ ಪ್ರಗತಿ ಸಂಯುಕ್ತ ಪ್ರೌಢಶಾಲೆ, ಸಾಧನಾ ಪ್ರೌಢಶಾಲೆ ಆನಂದಪುರಂ, ಭಾರತಿ ಪ್ರೌಢಶಾಲೆ ಚದರವಳ್ಳಿ, ರಾಮಕೃಷ್ಣ ವಸತಿ ವಿದ್ಯಾಲಯ ಸಾಗರ ಇವುಗಳು ಶೇ. 100 ಫಲಿತಾಂಶ ಪಡೆದಿವೆ.
ಸರ್ಕಾರಿ ಪ್ರೌಢಶಾಲೆಗಳು: ನಾಗವಳ್ಳಿ ಶೇ. 84.62,  ಬಿಳಿಗಾರು ಶೇ. 97.06, ಹುಲಿದೇವರಬನ ಶೇ.93.44, ಮಡಸೂರು ಲಿಂಗದಹಳ್ಳಿ ಶೇ.93.88, ಬ್ಯಾಕೋಡು ಶೇ.68.42, ಮಾಸೂರು ಶೇ.88.24, ಉಳ್ಳೂರು ಶೇ.63.93, ತ್ಯಾಗತರ್ ಶೇ.63.75, ಹಿರೇನೆಲ್ಲೂರು ಶೇ.73.33, ಬರೂರು ಶೇ.64.44, ಸುಭಾಷ್ ನಗರ ಪ್ರೌಢಶಾಲೆ ಸಾಗರ ಶೇ.79.79, ಕಟ್ಟಿನಕಾರು ಶೇ.57.50, ಕಾರ್ಗಲ್ ಶೇ. 76.47, ಕಾನ್ಲೆ ಶೇ.72.88, ಆವಿನಹಳ್ಳಿ ಶೇ.58.90, ಶಿರವಂತೆ ಶೇ.71.05, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ಆನಂದಪುರಂ ಶೇ.65.49, ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಾಗರ ಶೇ.68.28, ತಡಗಳಲೆ ಶೇ.72.22, ತುಮರಿ ಶೇ.75, ಉರ್ದು ಪ್ರೌಢಶಾಲೆ ಸಾಗರ ಶೇ.52.17.
ಅನುದಾನಿತ ಪ್ರೌಢಶಾಲೆ: ನಿರ್ಮಲ ಬಾಲಿಕಾ ಪ್ರೌಢಶಾಲೆ ಸಾಗರ ಶೇ.98.03, ಎಂಜಿಎನ್ ಪೈ ಪ್ರೌಢಶಾಲೆ ಸಾಗರ ಶೇ.88.58, ಎಚ್. ಶಿವಲಿಂಗಪ್ಪ ಪ್ರೌಢಶಾಲೆ ಶೇ.78.48, ಸ್ವಾಮಿ ವಿವೇಕಾನಂದ ಪ್ರೌಢಶಾಲೆ ತ್ಯಾಗರ್ತಿ ಶೇ.77.73, ಇಕ್ಕೇರಿ ಪ್ರೌಢಶಾಲೆ ಯಡಜಿಗಳೆಮನೆ ಶೇ.98.08, ನಲಂದ ಪದವಿಪೂರ್ವ ಕಾಲೇಜು ಪ್ರೌಢಶಾಲೆ ತಾಳಗುಪ್ಪ ಶೇ.64, ಭಾರತಿ ಪ್ರೌಢಶಾಲೆ ಕೆಳದಿ ಶೇ.79.07, ವಿ.ಎಸ್. ಪ್ರೌಢಶಾಲೆ ಕೇಡಲಸರ ಶೇ.81.25, ಕೋಯಾ ಪ್ರೌಢಶಾಲೆ ಸಾಗರ ಶೇ.76.92, ಕವಿನಿನಿ  ಪ್ರೌಢಶಾಲೆ ಜೋಗ ಶೇ.83.82, ಜ್ಞಾನ ಸಹ್ಯಾದ್ರಿ ಪ್ರೌಢಶಾಲೆ ಯಡೇಹಳ್ಳಿ ಶೇ.75.76, ಮಲೆನಾಡು ಪ್ರೌಢಶಾಲೆ ಗೌತಮಪುರ ಶೇ.64.63, ಎಸ್‌ಜೆಜಿಆರ್ ಪ್ರೌಢಶಾಲೆ ಮುರುಘಾಮಠ ಶೇ.68.18, ಶಾಂತಾವೇರಿ ಗೋಪಾಲಗೌಡ ಪ್ರೌಢಶಾಲೆ ಸೈದೂರು ಶೇ.76.47.
ಅನುದಾನರಹಿತ: ರಾಮಕೃಷ್ಣ ವಸತಿ ಶಾಲೆ ಮಡಸೂರು ಲಿಂಗದಹಳ್ಳಿ ಶೇ.98.72, ಸೇವಾ ಸಾಗರ ಪ್ರೌಢಶಾಲೆ ಸಾಗರ ಶೇ.95.74, ಸಂತ ಅಂತೋನಿ ಪ್ರೌಢಶಾಲೆ ಇಡುವಳ್ಳಿ ಶೇ.73.91, ವನಶ್ರೀ ವಸತಿ ವಿದ್ಯಾಲಯ ಸಾಗರ ಶೇ.93.75, ಕ್ರೆಸೆಂಟ್ ಪ್ರೌಢಶಾಲೆ ಸಾಗರ ಶೇ.51.72, ಚನ್ನಮಾಜಿ ಪ್ರೌಢಶಾಲೆ ಐಗಿನಬೈಲು ಶೇ.57.69, ಆಯುಷ್ ಫಿದರ್ ಜೋಷಿ ಬ್ಯಾರಿ ಮೆಮೋರಿಯಲ್ ಪ್ರೌಢಶಾಲೆ ಸಾಗರ ಶೇ.37.50.
ಪ್ರಸ್ತುತ 2013ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಯಲ್ಲಿ 20 ಅತ್ಯುನ್ನತ, ಅನುದಾನಿತ ಶಾಲೆಯಲ್ಲಿ 62 ಅತ್ಯುನ್ನತ ಹಾಗೂ ಅನುದಾನ ರಹಿತ ಶಾಲೆಯಲ್ಲಿ 87 ಅತ್ಯುನ್ನತ ಶ್ರೇಣಿ ದಾಖಲಾಗಿದೆ.
ಉತ್ತಮ ಫಲಿತಾಂಶ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನೇಚರ ಕುರುವರಿ 578(ಶೇ.92.48)ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ಸರ್ಕಾರಿ ಶಾಲೆಯಲ್ಲಿ ಯಾವುದೇ ವಿಶೇಷ ತರಬೇತಿ ಪಡೆಯದೆ, ಕಂಠಪಾಠ ಮಾಡದೆ ಕೇವಲ ಶಾಲೆಯ ಪಾಠ ಹಾಗೂ ಏಕಾಗ್ರತೆಯ ಓದಿನ ಮೂಲಕ ಈ ಸಾಧನೆ ಮಾಡಿರುವುದು ಹೆಗ್ಗಳಿಕೆಯಾಗಿದೆ. ತಾಲೂಕಿನ ಶಾರದಾಪುರ ಗ್ರಾಮದ ಇಕ್ಕೇರಿ ಪ್ರೌಢಶಾಲೆ ಶೆ. 98.07ರ ಫಲಿತಾಂಶ ಪಡೆದಿದೆ. ಈ ಶಾಲೆಯಿಂದ ಪರೀಕ್ಷೆ ಬರೆದಿದ್ದ 52 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ಬಾರಿ ಈ ಶಾಲೆ ಶೇ. 100ರ ಫಲಿತಾಂಶ ಪಡೆದ ತಾಲೂಕಿನ ಏಕೈಕ ಗ್ರಾಮಾಂತರ ಪ್ರೌಢಶಾಲೆಯಾಗಿ ಗಮನಸೆಳೆದಿತ್ತು.
ಈ ಶಾಲೆಯ ರಚನಾ ಆರ್. ಭಟ್ ಶೇ. 86.88ರ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಿಗೆ ಸಂಸ್ಕೃತ ಭಾಷೆಯಲ್ಲಿ 125ಕ್ಕೆ 125 ಅಂಕ ಲಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement