ರೂಪಶ್ರೀ ಕಾಲೇಜು ಶೇ.98.68
ಕ.ಪ್ರ.ವಾರ್ತೆ , ಸಾಗರ , ಮೇ 7
ದ್ವಿತೀಯ ಪಿಯುಸಿಯಲ್ಲಿ ತಾಲೂಕಿನ ಹೆಗ್ಗೋಡಿನ ಎಸ್. ರೂಪಶ್ರೀ ಪದವಿಪೂರ್ವ ಕಾಲೇಜು ಶೇ.98.68 ಫಲಿತಾಂಶ ಪಡೆಯುವ ಮೂಲಕ ತಾಲೂಕಿಗೆ ಪ್ರಥಮಸ್ಥಾನ ಗಳಿಸಿದೆ.
ಕಾಲೇಜಿನಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 75 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 7 ಅತ್ಯುನ್ನತ, 58 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿ, 2 ತೃತೀಯ ಶ್ರೇಣಿ. ಕಲಾವಿಭಾಗದಲ್ಲಿ ಬಿಂದು ಶೇ. 83.33, ವಾಣಿಜ್ಯ ವಿಭಾಗದಲ್ಲಿ ಶಶಾಂಕ್ ಕೆ.ಎಸ್. ಶೇ. 91.83 ಫಲಿತಾಂಶ ದಾಖಲಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಲೆಕ್ಕಶಾಸ್ತ್ರದಲ್ಲಿ ಗೌತಮ್ ಎಂ.ಡಿ. 100ಕ್ಕೆ 100 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಎಂಡಿಎಫ್ ಉತ್ತಮ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಂಡಿಎಫ್ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜು ಶೇ.91.07 ಫಲಿತಾಂಶ ಗಳಿಸಿದೆ.
97 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 87 ಉತ್ತೀರ್ಣರಾಗಿದ್ದಾರೆ. 17 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ವಂದನ ಎನ್. 566 ಅಂಕ ಪಡೆದು ಕಾಲೇಜಿಗೆ ಪ್ರಥಮ, ಅನುಷಾ ಪಿ. 563 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಂದನ ಎನ್. ರಸಾಯನಶಾಸ್ತ್ರದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ಶೇ.71.41 ಫಲಿತಾಂಶ: ಎಂಡಿಎಫ್ ಪಿಯು ಕಾಲೇಜು ಶೇ. 71.41 ಫಲಿತಾಂಶ ಪಡೆದಿದೆ. 98 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 70 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 5 ಅತ್ಯುನ್ನತ, 27 ಪ್ರಥಮ ಶ್ರೇಣಿ, 18 ದ್ವಿತೀಯ ಶ್ರೇಣಿ, 20 ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಮಿತ್ ಕೆ.ಎಸ್. ಶೇ. 92.50 ಪಡೆದು, ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಬಾಲಕಿಯರ ಕಾಲೇಜು: ಶೇ.77.40 ಫಲಿತಾಂಶ ದಾಖಲಿಸಿದೆ. ಒಟ್ಟು 279 ವಿದ್ಯಾರ್ಥಿನಿಯರಲ್ಲಿ 216 ವಿದ್ಯಾರ್ಥಿನಿಯರು ಉತ್ತೀಈ್ಗರಾಗಿದ್ದಾರೆ. 2 ಅತ್ಯುನ್ನತ, 102 ಪ್ರಥಮ, 73 ದ್ವಿತೀಯ ಹಾಗೂ 39 ತೃತೀಯ. ವಾಣಿಜ್ಯ ಶಾಸ್ತ್ರದಲ್ಲಿ ಸುಪ್ರಿಯ ಶೇ. 92.33 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಕಲಾವಿಭಾಗದಲ್ಲಿ ಕಾವ್ಯ ನಾಯಕ್ ಶೇ. 85.67 ಫಲಿತಾಂಶ ದಾಖಲಿಸಿದ್ದಾರೆ.