ಶಿರಾಳಕೊಪ್ಪ ಉತ್ತಮ ಫಲಿತಾಂಶ
ಕ.ಪ್ರ.ವಾರ್ತೆ , ಶಿರಾಳಕೊಪ್ಪ , ಮೇ 7
ಪಟ್ಟಣದ ಸಪಪೂ ಕಾಲೇಜಿನ ಫ್ರೌಡಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಫಲಿತಾಂಶ ಬಂದಿದೆ.
ಒಟ್ಟು 86ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂರು ವಿದ್ಯಾರ್ಥಿಗಳು ಡಿಸ್ಟಿಂಗ್ಶನ್ ಪಡೆದಿದ್ದಾರೆ. 30 ವಿದ್ಯಾರ್ಥಿಗಳು ಪ್ರಥಮ, 18ವಿದ್ಯಾರ್ಥಿಗಳು ದ್ವಿತಿಯ ಹಾಗೂ 23 ವಿದ್ಯಾರ್ಥಿಗಳು ಪಾಸಾಗಿ ಶಾಲೆಗೆ ಕೀರ್ತಿತಂದಿದ್ದಾರೆ.
ಶಾಲೆಯ ಪವನ್ ಎನ್.ಆರ್ ಶೇ. 88ಕ್ಕೂ ಹೆಚ್ಚು ಅಂಕಪಡೆದು ಪ್ರಥಮ ಸ್ಥಾನಪಡೆದಿದ್ದಾನೆ. ಜಿ. ತನುಶ್ರೀ ಶೇ.87ಕ್ಕೂ ಹೆಚ್ಚು ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ವಿಜಯಕುಮಾರ್. ಎಂ ಶೇ.86 ಅಂಕ ಪಡೆದು ತೃತೀಯ ಸ್ಥಾನಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಅಭಿನಂದನೆ: ಶಾಲಾ ಸಮಿತಿ ಅಧ್ಯಕ್ಷ ರವಿ ಶಾನಭೋಗ್ ಮಾತನಾಡಿ, ಸರ್ಕಾರಿ ಶಾಲೆಯೊಂದರಲ್ಲಿ ಇಷ್ಟು ಉತ್ತಮ ಫಲಿತಾಂಶ ಪಡೆಯಲು ಶಾಲೆಯ ಶಿಕ್ಷಕರ ವ್ಯಾಪಕ ಶ್ರಮ ಅಡಗಿದೆ ಅವರನ್ನು ಹಾಗೂ ಶಾಲೆಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಅಭಿನಂದಿಸುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಬಾಲಿಕೀಯರ ಫ್ರೌಢಶಾಲೆಯಲ್ಲಿ: ಪಟ್ಟಣದ ಸರ್ಕಾರಿ ಬಾಲಿಕೀಯರ ಫ್ರೌಢಶಾಲೆಯಲ್ಲಿ ಶೇ. 77ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಶೇ.70ರಷ್ಟು ಫಲಿತಾಂಶ ಬಂದಿರುವದಾಗಿ ಪ್ರಾಂಶುಪಾಲ ಬಸವರಾಜ್ ದಡ್ಡಿಕೊಪ್ಪ ತಿಳಿಸಿದ್ದಾರೆ. ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಶೇ.67.50ರಷ್ಟು ಫಲಿತಾಂಶ ಬಂದಿರುವದಾಗಿ ಅಲ್ಲಿಯ ಪ್ರಾಂಶಪಾಲರು ತಿಳಿಸಿದ್ದಾರೆ.