ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹರ್ಡೀಕರ್ ಆದರ್ಶ ಅನುಕರಣೀಯ'

Vishwanath S
Updated On : 8 May 2013, 4:47 am

ಕ.ಪ್ರ.ವಾರ್ತೆ ,  ಶಿವಮೊಗ್ಗ ,   ಮೇ 7
ಡಾ. ನಾ.ಸು. ಹರ್‌ಡೀಕರ್ ಅವರ ತತ್ವ, ಅದರ್ಶಗಳು ಸರ್ವಕಾಲಕ್ಕೂ ಅನುಕರಣೀಯ ಎಂದು  ಭಾರತ ಸೇವಾದಳ ಅಧ್ಯಕ್ಷ ವೈ.ಹೆಚ್. ನಾಗರಾಜಜ್ತಿಳಿಸಿದರು.
ನಗರದಲ್ಲಿ ಮಂಗಳವಾರ ಅವರು ಸೇವಾದಳ ಕಚೇರಿಯಲ್ಲಿ ಡಾ. ನಾ.ಸು. ಹರ್ಡೀಕರ್ ಅವರ  124ನೇ ಜಯಂತ್ಯುತ್ಸವ ಕಾರ್ಯಕ್ರಮಲ್ಲಿ, ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಶಿಸ್ತಿನ ಸಂಘಟನೆ ಅತ್ಯವಶ್ಯಕವಾಗಿತ್ತು. ಶಿಸ್ತಿನ ಸ್ವಯಂಸೇವಕರು ಹಾಗೂ ಸತ್ಯಾಗ್ರಾಹಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ತಯಾರಿಸಿ ದೇಶದ ಸ್ವತಂತ್ರ ಹೋರಾಟದಲ್ಲಿ ಭಾರತ ಸೇವಾದಳ ಪ್ರಮುಖ ಪಾತ್ರ ವಹಿಸಿತ್ತು ಎಂದರು. ಭಾರತ ಸೇವಾದಳದ ಕಾರ್ಯದರ್ಶಿಯೂ ಆದ ಡಿ. ಮಂಜುನಾಥ್, ಸಂಯಮ, ದೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣ ಸೇವಾ ಮನೋಬಾವನೆಯನ್ನು ಮೂಡಿಸುವಲ್ಲಿ ಪ್ರಯತ್ನ ಪಡುತ್ತಾ ಇದೆ ಎಂದರು.
ಬಿ.ವಿ. ಶಾಮಯ್ಯ, ರುದ್ರಪ್ಪ, ಜಯಣ್ಣ, ಬಸವರಾಜಪ್ಪ, ವಾಲೇಕರ್, ರಾಮಚಂದ್ರ ಹೆಗಡೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement