ಬಂಪರ್ ಬೆಳೆ ಪಡೆದ ಜೆಡಿಎಸ್
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 8
ಪ್ರಮುಖ ರಾಷ್ಟ್ರೀಯ ನಾಯಕರು ಮಾಡಿದ ಪ್ರವಾಸ ಬಿಜೆಪಿ ಪಾಲಿಗೆ ವಿಫಲವಾಗಿದ್ದರೆ, ಕಾಂಗ್ರೆಸ್ ಪಾಲಿಗೆ ಮಿಶ್ರಫಲ ನೀಡಿದೆ. ಜೆಡಿಎಸ್ ಮಾತ್ರ ಬಂಪರ್ ಜಯ ಸಾಧಿಸಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಕ್ಕೆ, ಸುಶ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಶಿವಮೊಗ್ಗಕ್ಕೆ, ಮುಖ್ಯಮಂತ್ರಿ ಜಗದೀಶ್ ಶ್ಟೆರ್ ಅವರು ಸೊರಬಕ್ಕೆ ಭೇಟಿ ನೀಡಿದ್ದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ.
ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಭದ್ರಾವತಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಅವರಿಗೆ ಬಲ ನೀಡಿಲ್ಲ. ಅವರು ಸೋಲು ಕಂಡಿದ್ದಾರೆ.