ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಗೋಡು ಗೆಲವು: ಸಂಭ್ರಮಿಸಿದ ಕಾರ್ಯಕರ್ತರು

Lingaraj Badiger
Updated On : 10 May 2013, 12:00 pm

ಸಾಗರ: ಬುಧವಾರ ಬೆಳಗ್ಗೆ ಕಾಗೋಡು ತಿಮ್ಮಪ್ಪನವರ ಗೆಲುವು ಘೋಷಣೆಯಾಗುತ್ತಿದ್ದಂತೆ ಸಾಗರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೆಲವೇ ನಿಮಿಷಗಳಲ್ಲಿ ಪಟ್ಟಣದ ಎಲ್ಲ ಬೀದಿಗಳಲ್ಲಿ ಕಾರ್ಯಕರ್ತರು ವಿಜೃಂಭಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 ಕಾಗೋಡು ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಎಲ್ಲ ರಸ್ತೆಗಳು ಕಾಂಗ್ರೆಸ್ ಕಚೇರಿಯತ್ತ ಮುಖ ಮಾಡಿದ್ದವು. ಗಾಂಧಿಮಂದಿರಕ್ಕೆ ತಂಡೋಪತಂಡವಾಗಿ ಹರಿದುಬಂದ ಕಾರ್ಯಕರ್ತರು, ಕಾಗೋಡರ ಅಭಿಮಾನಿಗಳು ಹರ್ಷೋದ್ಘಾರ ಮಾಡಿ, ಪರಸ್ಪರ ಬಣ್ಣ ಎರಚಿಕೊಂಡು, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಮೆರವಣಿಗೆ: ಪ್ರಮುಖ ಬೀದಿಗಳಲ್ಲಿ ಉತ್ಸಾಹದಿಂದ ಮೆರವಣಿಗೆ ನಡೆಸಿದ ಅಭಿಮಾನಿಗಳು ಪ್ರಮುಖ ವಣತ್ತಗಳಲ್ಲಿ ಪಟಾಕಿ ಸಿಡಿಸಿ, ಜಯಕಾರ ಕೂಗಿ ವಿಜಯೋತ್ಸವ ಆಚರಿಸಿದರು. ಇಡೀ ದಿನ ಕಾಂಗ್ರೆಸ್ ಕಚೇರಿಯಲ್ಲಿ ಜನಜಾತ್ರೆ ಸೇರಿತ್ತು.     ಸಂಜೆ ಕಾಗೋಡು ತಿಮ್ಮಪ್ಪನವರು ಸಾಗರ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಶಿವಮೊಗ್ಗ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಎದುರಿನಲ್ಲಿ ಸಾವಿರಾರು ಜನರು ಜಮಾಯಿಸಿ ತಮ್ಮ ನೆಚ್ಚಿನ ನಾಯಕನನನು ಬರಮಾಡಿಕೊಂಡು ಹಾರ ತುರಾಯಿ ಹಾಕಿ ಸ್ವಾಗತಿಸಿದರು. ತಿಮ್ಮಪ್ಪನವರನ್ನು ಮೆರವಣಿಗೆಯ ಮೂಲಕ ಪಕ್ಷದ ಕಚೇರಿಯವರೆಗೆ ಕರೆತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement