ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾನವೀಯ ಗುಣಗಳು ಬೆಳೆಯಲಿ: ರಂಭಾಪುರೀ ಶ್ರೀ

Rashmi Kasaragodu
Updated On : 10 May 2013, 1:40 am

ಸೊರಬ: ಮನುಷ್ಯನಲ್ಲಿ ಮನುಷ್ಯತ್ವ, ಮಾನವೀಯತೆಯ ಆದರ್ಶಗಳು ಬೆಳೆದು ಬರಬೇಕು ಎಂದು ಬಾಳೆಹೊನ್ನೂರು ರಂಭಾಪುರೀ ಮಠದ ಶ್ರೀಗಳು ತಿಳಿಸಿದರು. ತಾಲೂಕು ಜಡೆ ಗ್ರಾಮದಲ್ಲಿ ನಡೆಯುತ್ತಿರುವ ಜಂಗಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಶಾಂತಿಯ ಬದುಕಿಗೆ ಶಾಂತಿ, ನೆಮ್ಮದಿ ಅಗತ್ಯವಿದೆ, ಶಾಂತಿ, ಸೌಹಾರ್ದತೆ ಬೆಳೆದು ಬರಲು ಧರ್ಮ ಅವಶ್ಯವಿರುತ್ತದೆ. ಭಾರತದಲ್ಲಿನ ಧರ್ಮ ಹಲವಾದರೂ ಗುರಿ ಒಂದೆ ಎಂಬುದನ್ನು ಅರಿತು ಪಾಲಿಸುವ ಮನೋಭಾವಕ್ಕೆ ಒತ್ತು ನೀಡಬೇಕು ಎಂದರು.
ಪಟ್ಟಾಭಿಷಕ್ತರಾಗಲಿರುವ ಜಡೆ ಹಿರೇಮಠದ ಅಮರೇಶ್ವರ ಶ್ರೀಗಳಿಗೆ ಶ್ರೀ ಪೀಠದಿಂದ ರೇಷ್ಮೆ ಮಡಿ, ಫಲಪುಷ್ಪವಿತ್ತು ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಅಖಿಲಭಾರತ ವೀರಶೈವ ಮಹಾ ಸಭಾದ  ಅಧ್ಯಕ್ಷ ಎಸ್. ತಿಪ್ಪಣ್ಣ, ಸಾಗರ ವೀರಶೈವ ಸಮಾಜದ ಅಧ್ಯಕ್ಷ ಯು.ಸಿ.ಸಿದ್ಧಲಿಂಗೇಶ್, ಶಿವಮೊಗ್ಗ ಘಟಕದ ಅಧ್ಯಕ್ಷ ರುದ್ರಮೂರ್ತಿ ಸಜ್ಜನ್, ಸೊರಬ ಘಟಕದ ಅಧ್ಯಕ್ಷ ಇಂದೂಧರ ಒಡೆಯರ್, ಸೊರಬ ಟೌನನ್ವೀರಶೈವ ಸಮಾಜದ ಅಧ್ಯಕ್ಷ ಗುತ್ತಿ ಚೆನ್ನಬಸಪ್ಪ, ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೂಡಲದ ಶ್ರೀ ಗುರುನಂಜೇಶ್ವರ ಶಿವಾಚಾರ್ಯರು ವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement