ಇಂದು ಪ್ರದರ್ಶನ
ಸೊರಬ: ಮೇ 11ರಂದು ಸಂಜೆ ತಾಲೂಕು ಉಳವಿ ಸಮೀಪದ ಹೊರಬೈಲು ಗ್ರಾಮದಲ್ಲಿ ನಾಟಕ, ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಇಲ್ಲಿನ ಗಾಳಿ ವೇದಿಕೆಯವರು, ಬೆಂಗಳೂರು ಗಾಳಿ ಯಕ್ಷ ಬಳಗ ಮತ್ತು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಸ್ತಿ ದಕ್ಕಿತು ಯಾರಿಗೆ ನಾಟಕ ಮತ್ತು ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನವಿದೆ. ಕಲಾ ಅಭಿಮಾನಿಗಳು ಪ್ರದರ್ಶನದ ಸದುಪಯೋಗ ಪಡಿಸಿಕೊಂಡು, ಪ್ರೋತ್ಸಾಹಿಸಬೇಕು ಎಂದು ಯಕ್ಷ ಬಳಗದ ಸಂಚಾಲಕ ಗಾಳಿ ಸತ್ಯನಾರಾಯಣ್ ತಿಳಿಸಿದ್ದಾರೆ.