ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದಂಡಾವತಿ ವಿರುದ್ಧದ ಗೆಲುವು

Lingaraj Badiger
Updated On : 11 May 2013, 11:00 am

ಕ.ಪ್ರ.ಶಿವಮೊಗ್ಗ, ಮೇ 10
ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಗೆಲುವು ದಂಡಾವತಿ ಯೋಜನೆ ವಿರುದ್ಧದ ಗೆಲುವು ಎಂದು ದಂಡಾವತಿ ಯೋಜನೆ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸೃಷ್ಟಿಸಲಾದ ಜನ ವಿರೋಧಿ, ಅವೈಜ್ಞಾನಿಕವೂ ಆದ ದಂಡಾವತಿ ಯೋಜನೆಯನ್ನು ವಿರೋಧಿಸುವವರಿಗೆ ಮತ ನೀಡುವಂತೆ ಸೊರಬದ ಜನತೆಯನ್ನು ಸಮಿತಿ ವಿನಂತಿಸಿತ್ತು. ಚುನಾವಣಾ ವೇಳೆ ಯೋಜನೆಯ ಪರವಾಗಿದ್ದ ಅಭ್ಯರ್ಥಿ ಉದ್ಧೇಶಿತ ಯೋಜನಾ ಪ್ರದೇಶದ ಒಳಗೆ ಪ್ರವೇಶಿಸಲು ಮಾಡಿದ ಪ್ರಯತ್ನವನ್ನು ಸಮಿತಿ ವಿಫಲಗೊಳಿಸಿತ್ತು.
ರಾಜಕಾರಣಿಗಳು ಗುರುತಿಸಿದ ಸೊರಬದ ಪ್ರಜ್ಞಾವಂತ ಜನರೂ ಈ ಯೋಜನೆಯ ನಿರರ್ಥಕತೆಯನ್ನು ಈಗ ಅರಿತಿದ್ದಾರೆ. ಆದರಿಂದಲ್ಲೇ ಈ ಯೋಜನೆಯನ್ನು ಆರಂಭದಿಂದಲೂ ವಿರೋಧಿಸುತ್ತ ಬಂದ ಮಧು ಬಂಗಾರಪ್ಪ ಅವರಿಗೆ ಜನತೆ ಮತ ನೀಡಿ ಗೆಲ್ಲಿಸುವುದರ ಮೂಲಕ ದಂಡಾವತಿ ಯೋಜನೆಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದು, ನೂತನ ಶಾಸಕ ಮಧು ಬಂಗಾರಪ್ಪ ಅವರಿಗೆ ಸಮಿತಿ ಅಭಿನಂದಿಸಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಸರ್ಜಾಶಂಕರ ಹರಳಿಮಠ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement