ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಕಾರಾತ್ಮಕ ಮನೋಭಾವವೇ ಪಕ್ಷ ಸೋಲಲು ಕಾರಣ: ಜಯಂತ್

Lingaraj Badiger
Updated On : 11 May 2013, 10:59 am

ಕಪ್ರ ವಾರ್ತೆ, ಸಾಗರ, ಮೇ 10
ಮತದಾರರಲ್ಲಿನ ನಕಾರಾತ್ಮಕ ಮನೋಭಾವ, ಒಗ್ಗಟ್ಟಿನ ಪ್ರಯತ್ನ ಹಾಗೂ ಹಣದ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಪಕ್ಷ ಸೋಲುವಂತಾಯಿತು ಎಂದು ಕೆಜೆಪಿ ಪರಾಜಿತ ಅಭ್ಯರ್ಥಿ ಬಿ.ಆರ್. ಜಯಂತ್ ಹೇಳಿದರು.
 ಕೆಜೆಪಿ ಹಾಗೂ ಬಿಜೆಪಿ ಬೇರೆ ಬೇರೆ ಪಕ್ಷವಾಗಿದ್ದರೂ ಮತದಾರರಿಗೆ ಈ ಎರಡೂ ಪಕ್ಷಗಳ ಮೇಲೆ ನಕಾರಾತ್ಮಕ ಭಾವನೆ ಇತ್ತು. ಹಿಂದೆ ಜನತಾ ಪಕ್ಷ ಇಬ್ಭಾಗವಾದಾಗಲೂ ಇದೇ ರೀತಿಯ ಪರಿಣಾಮ ಆಗಿತ್ತು. ಜೊತೆಗೆ ಹೊಸ ಪಕ್ಷ, ಗುರುತಿನ ಸಮಸ್ಯೆ ಇವೆಲ್ಲವುಗಳ ಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿದರು.
ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ ಸ್ತ್ರೀಶಕ್ತ ಸ್ವಸಹಾಯ ಸಂಘಗಳಿಗೆ ಕಾಂಗ್ರೆಸ್ ಹಣ ಕೊಟ್ಟಿದೆ. ಇದರ ಜೊತೆಗೆ ಪಕ್ಷದ ಎಲ್ಲರಿಂದ ಆತ್ಮೀಯ ಪ್ರಯತ್ನ ನಡೆಯಲಿಲ್ಲ ಎಂದರು.
ಮತ ಹಾಕಲಿಲ್ಲ: ಚುನಾವಣೆಯಲ್ಲಿ ತಾವು ಜಾತಿ ಆಧಾರದಲ್ಲಿ ಮತವನ್ನು ಕೇಳಲಿಲ್ಲ ಎಂದು ಹೇಳಿದ ಜಯಂತ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊಟ್ಟ ಜನಪರ ಕಾರ್ಯಕ್ರಮ, ಅಭಿವೃದ್ಧಿ ರಾಜಕಾರಣ, ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸಿದ್ದೇನೆ. ಇವನ್ನು ಜನ ಒಪ್ಪಿಕೊಂಡಿದ್ದರೂ ಅದು ಮತಗಳಾಗಿ ಬರಲಿಲ್ಲ ಎಂದು ಹೇಳಿದರು.
ಖಂಡನೆ: ಚುನಾವಣೆ ಸಂದರ್ಭದಲ್ಲಿ ಒಂದು ಸಮುದಾಯದ ಕುರಿತಾಗಿ ಹಂಚಿಕೆಯಾದ ಕರಪತ್ರದ ಕುರಿತು ಪ್ರತಿಕ್ರಿಯಿಸಿ, ತಾವು ಎಂದೂ ಕೀಳುಮಟ್ಟದ ರಾಜಕಾರಣ ಮಾಡಿಯೂ ಇಲ್ಲ. ಸದನ್ನು ಬೆಂಬಲಿಸುವುದೂ ಇಲ್ಲ. ತಮಗೆ ಕೆಟ್ಟ ಹೆಸರು ತರಬೇಕು, ಒಂದು ವರ್ಗದ ಮತಗಳು ಬರಬಾರದು ಎನ್ನುವ ಕಾರಣಕ್ಕಾಗಿ ಈ ಕರಪತ್ರವನ್ನು ಹೊರಡಿಸಲಾಗಿತ್ತು. ಅದನ್ನು ನಾನು ಆಗಲೇ ತೀವ್ರವಾಗಿ ಖಂಡಿಸಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಎಂದರು.
ಇಂಡೀಕರಣ ವಿರುದ್ಧ ಹೋರಾಟ: ಹಾಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿದೆ. ಈಗಲಾದರೂ ಇಂಡೀಕರಣವಾದ ಎಲ್ಲ ಭೂಮಿಯನ್ನು ಸರ್ಕಾರ ಯಥಾಸ್ಥಿತಿಗೆ ತರಬೇಕು. ಇಂಡೀಕರಣ ಕಾಯ್ದೆಯನ್ನು ಸಂಪೂರ್ಣ ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಕಾಗೋಡು ತಿಮ್ಮಪ್ಪನವರು ಹೆಚ್ಚು ಮುತುವರ್ಜಿ ವಹಿಸಬೇಕು. ತಕ್ಷಣ ಇದು ಸಾಧ್ಯವಾಗದಿದ್ದರೆ ಪಕ್ಷದ ವತಿಯಿಂದ ತೀವ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಸರಸ್ವತಿ ನಾಗರಾಜ್, ಆಸಿಫ್, ವಿ.ಕೆ. ವಿಜಯಕುಮಾರ್, ಇಕ್ಬಾಲ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement