ಪಡಿತರ ಚೀಟಿದಾರರ ಗಮನಕ್ಕೆ
ಶಿವಮೊಗ್ಗ: ಡಿಸೆಂಬರ್ 2010ಕ್ಕಿಂತ ಹಿಂದೆ ಖಾಸಗೀ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳನ್ನು ಹೊಂದಿರುವ ತಮ್ಮ ಅಥವಾ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್ನಿಂದ ಖಈಖಊಃ ಪದ ಮತ್ತು ಪಡಿತರ ಚೀಟಿ ಸಂಖ್ಯೆ ನಮೂದಿಸಿ ಮೊ.ಸಂ.9212357123ಗೆ ಕಳುಹಿಸಿ, ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಸಂಖ್ಯೆ ಪಡೆದು ತೋರಿಸಿದಲ್ಲಿ ಮಾತ್ರ ಮೇ-2013ನೇ ತಿಂಗಳ ಪಡಿತರ ಮತ್ತು ಸೀಮೆಎಣ್ಣೆ ಪಡೆಯಬಹುದು. ನಿಮ್ಮ ಮೊಬೈಲ್ಗೆ ಬರುವ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು. ಗ್ರಾಮೀಣ ಪ್ರದೇಶದವರು ಸಂಬಂಧಿಸಿದ ಪಂಚಾಯಿತಿ ಕಚೇರಿಗೆ ಹೋಗಿ ಈ ಮಾಹಿತಿ ನೀಡುವುದು.
ಈ ತಿಂಗಳ ಒಳಗೆ ಅಂತಹ ಪಡಿತರ ಚೀಟಿಗಳನ್ನು ಹೊಂದಿದವರು ನಗರ ಪ್ರದೇಶಗಳಲ್ಲಿ ಕುಟುಂಬ ಸದಸ್ಯರ ಫೋಟೋ ಮತ್ತು ಬಯೋವುಟ್ರಿಕ್ಗಳನ್ನು ಸನಿಹದ ಫೋಟೋ ಬಯೋ ಸೇವಾ ಕೇಂದ್ರಕ್ಕೆ ಹೋಗಿ ನೀಡಬೇಕು. ತಪ್ಪಿದಲ್ಲಿ ಅಂತಹ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.