ಶಿಕಾರಿಪುರದಲ್ಲಿ ಕಾಂಗ್ರೆಸ್ ಸಂಭ್ರಮ
ಶಿಕಾರಿಪುರ: ರಾಜ್ಯದಲ್ಲಿ ಸ್ವಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಸಿದ್ದರಾಮಯ್ಯ ಆಯ್ಕೆಯಾಗಿರುವದಕ್ಕೆ ಸಂತಸ ವ್ಯಕ್ತಪಡಿಸಿ ಶಿಕಾರಿಪುರದ ಸಿದ್ದರಾಮಯ್ಯ ಅಭಿಮಾನಿಗಳ ಸಂಘ ಹಾಗೂ ಯುವ ಕಾಂಗ್ರೆಸ್ ಘಟಕದಿಂದ ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಬದಲ್ಲಿ ಮಾತನಾಡಿದ ತಾ.ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹಲ್ಮಾರ್, ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸುವ ಕಾಂಗ್ರೆಸ್ ಪಕ್ಷದ ಮೂಲ ಆಶಯದಡಿ ಸಿದ್ದರಾಮಯ್ಯನವರು ಆಯ್ಕೆಯಾಗಿದ್ದು, ಎಲ್ಲಾ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರ ಆಯ್ಕೆಯಿಂದ ಸತತ 8 ವರ್ಷದಿಂದ ವಿರೋಧಪಕ್ಷದಲ್ಲಿ ಕಾರ್ಯನಿರ್ವಹಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಶುಭ ದಿನವಾಗಿದೆ ಎಂದರು.
ಈ ಸಂದರ್ಬದಲ್ಲಿ ಯುವ ಘಟಕದ ಹಳ್ಳೂರು ಪರಮೇಶ್ವರಪ್ಪ, ಸುರೇಶ್ ಧಾರವಾಡದ, ನಾಗರಾಜ್ ಬಾಳೆಕಾಯಿ,ನಗರದ ಗುಡ್ಡಪ್ಪ, ರಾಮು, ಷಣ್ಮುಖ, ಸಂತೋಷ, ನಟರಾಜ್, ಗಿರೀಶ್ ಗುಡ್ಡಳ್ಳಿ, ಚೇತನಾ, ಹುಲ್ಮಾರ್ ಮಧು ಇದ್ದರು.