ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶ್ರೀಕಾಂತ್ ರಾಜಿನಾಮೆ ಅಂಗೀಕರಿಸದಿರಲು ಮನವಿ

Lingaraj Badiger
Updated On : 11 May 2013, 10:59 am

ಶಿವಮೊಗ್ಗ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜಿನಾಮೆಯನ್ನು ಅಂಗೀಕರಿಸಬಾರದು. ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಜೆಡಿಎಸ್ ನಗರಸಭಾ ಸದಸ್ಯರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದು, ತಪ್ಪಿದಲ್ಲಿ ತಾವೂ ಸಹ ರಾಜಿನಾಮೆ ನೀಡುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಇವರು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದ ಜಾತ್ಯತೀತ ಜನತಾದಳವನ್ನು ಎಂ. ಶ್ರೀಕಾಂತ್ ಅವರು ಗಟ್ಟಿಗೊಳಿಸಿ ಪುನಶ್ಚೇತನ ನೀಡಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ದೃತಿಗೆಡದೆ ಸಂಘಟನೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷ ಹಲವು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂ. ಶ್ರೀಕಾಂತ್ ಅವರಿಲ್ಲದೆ ಪಕ್ಷದ ಸಂಘಟನೆ ಮಾಡುವುದು ಅಸಾಧ್ಯದ ಮಾತು. ಆದ್ದರಿಂದ ಅವರನ್ನು ಮುಂದುವರಿಸಬೇಕು. ಇಲ್ಲದಿದ್ದರೆ ನಾವೂ ರಾಜಿನಾಮೆ ನೀಡುತ್ತೇವೆ ಎಂದಿದ್ದಾರೆ.
ನಗರಸಭಾ ಸದಸ್ಯರಾದ ರೇಖಾ ಚಂದ್ರಶೇಖರ್, ಎಚ್. ಪಾಲಾಕ್ಷಿ, ನಾಗರಾಜ್ ಕಂಕಾರಿ, ಮಹೇಶ್, ಏಳುಮಲೈ (ಕೇಬಲ್ ಬಾಬು),  ವಿವಿಧ ವಿಭಾಗಗಳ ಜಿಲ್ಲಾಧ್ಯಕ್ಷ ಎಚ್.ವಿ. ಮಹೇಶ್ವರಪ್ಪ, ಎಸ್.ವಿ. ರಾಜಮ್ಮ, ಜಿ.ಡಿ. ಮಂಜುನಾಥ್, ಎಂ. ಶಮೀವುಲ್ಲಾ, ಡಿ. ಕಾಂತರಾಜ್, ತಿಮ್ಮಪ್ಪ, ಎಚ್. ನಾಗರಾಜ್, ರಾಕೇಶ್ ಡಿಸೋಜಾ, ಎನ್. ರಾಮೇಗೌಡ ಈ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement