ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಮಿಷದ ಗೆಲವು ತಾತ್ಕಾಲಿಕ: ಎಸ್.ಟಿ ಬಳಿಗಾರ್

Vishwanath S
Updated On : 12 May 2013, 11:58 am

ಕ.ಪ್ರ.ವಾರ್ತೆ,ಶಿಕಾರಿಪುರ, ಮೇ 11
 ಚುನಾವಣೆಯಲ್ಲಿ ಹಣ, ಹೆಂಡಗಳ ಆಮಿಷದ ಮೂಲಕ ಗಳಿಸಿದ ಗೆಲವು ತಾತ್ಕಾಲಿಕವಾಗಿದ್ದು, ಪ್ರಜಾಸತ್ತಾತ್ಮಕವಾಗಿ ಮತದಾರರನ್ನು ತಲುಪಿ ಗಳಿಸುವ ಜಯ ಮಾತ್ರ ಶಾಶ್ವತ ಎಂದು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪರಾಜಿತಗೊಂಡ ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಚ್.ಟಿ ಬಳಿಗಾರ್ ಅಭಿಪ್ರಾಯಪಟ್ಟರು.
   ಶನಿವಾರ ಪಟ್ಟಣದ ಗುರುಭವನದಲ್ಲಿ ಪಕ್ಷದಿಂದ ಮತದಾರರಿಗೆ ನಡೆದ ಅಭಿನಂದನಾ ಸಮಾರಂಭ ಹಾಗೂ ಪಕ್ಷಕ್ಕೆ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾನ ಸ್ವೀಕಾರ: ಚುನಾವಣೆಯಲ್ಲಿ ಸೋಲು, ಗೆಲವು ನಿಶ್ಚಿತವಾಗಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸುವವನು ಮಾತ್ರ ನಿಜವಾದ ಜನಪ್ರತಿನಿಧಿ ಎಂದರು.
  ತಾಲೂಕಿನಲ್ಲಿ ಮುಂದಿನ ದಿನದಲ್ಲಿ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಚುನಾವಣೆಯನ್ನು ಎದುರಿಸಿ ಜಯಗಳಿಸಿದ ರೀತಿಯನ್ನು ಮಾದರಿಯಾಗಿಸಿಕೊಂಡು ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಮುಂದಿನ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವುದಾಗಿ ತಿಳಿಸಿದರು.
 ಕಡಿಮೆ ಅವಧಿಯಲ್ಲಿ ಹೆಚ್ಚು ವಿಶ್ವಾಸದಿಂದ ಅಧಿಕ ಮತ ನೀಡಿದ ಮತದಾರರ ಋಣ ತೀರಿಸುವುದು ಅಸಾಧ್ಯ ವಾಗಿದ್ದು, ಪ್ರತಿಯಾಗಿ ಸಮಸ್ಯೆಗಳಿಗೆ ಹೋರಾಟದ ಮೂಲಕ ಸ್ವಂದಿಸುವುದಾಗಿ ತಿಳಿಸಿದರು.
ಅಪರೀಪದ ಸಂಘಟಕ: ತಾಲೂಕು ಜೆಡಿಎಸ್ ಅಧ್ಯಕ್ಷ ನಾಗನಗೌಡ ಪಾಟೀಲ ಮಾತನಾಡಿ, ಆಡಳಿತಾರೂಢ ಬಿಜೆಪಿ ತಾಲೂಕಿನಲ್ಲಿ ಕೇವಲ 2 ಸಾವಿರ ಮತ ಪಡೆದಿದ್ದು, ಇತ್ತೀಚೆಗೆ 7 ಕ್ಷೇತ್ರಕ್ಕೆ ಆಗಮಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಬಳಿಗಾರ ಬಗ್ಗೆ ಕಾರ್ಯಕರ್ತ ಹೆಮ್ಮೆ ಪಡಬೇಕಾಗಿದೆ ಎಂದರು. ಇಂತಹ ಅಪರೂಪದ ಸಂಘಟಕ ಬಳಿಗಾರರನ್ನು ತಾಲೂಕಿನ ನಾಯಕರನ್ನಾಗಿ ರೂಪಿಸುವವರೆಗೂ ಕಾರ್ಯಕರ್ತರು ವಿಶ್ರಮಿಸದಂತೆ ತಿಳಿಸಿದರು.
   ಈ ಸಂದರ್ಭದಲ್ಲಿ ನಗರಾಧ್ಯಕ್ಷ ರೇವಣ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಜಯಾನಾಯ್ಕ, ಮುಖಂಡ ರಾಮಲಿಂಗಪ್ಪ, ತೇಜಾನಾಯ್ಕ, ಮಾಜಿ ಯೋಧ ರವಿ, ಗಾಯತ್ರಮ್ಮ, ಕುಸುಮಮ್ಮ, ಮಾಲಾ, ಮಕ್ಬೂಲ್ ಸಾಬ್, ಹರಗಿ ಮಲ್ಲೇಶಪ್ಪ, ರಾಜಾಸಾಬ್, ನೂರುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement