ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಗೋಡು ಮೇಲೆ ಅನುಕಂಪ: ಜೆಡಿಎಸ್ ಅಭ್ಯರ್ಥಿ ಸೋಲು

Vishwanath S
Updated On : 12 May 2013, 11:58 am

ಸಾಗರ: ರಾಜ್ಯಾದ್ಯಂತ ಇದ್ದ ಕಾಂಗ್ರೆಸ್ ಅಲೆ, ಹಾಗೂ ಕ್ಷೇತ್ರದಲ್ಲಿದ್ದ ಕಾಗೋಡು ತಿಮ್ಮಪ್ಪ ಪರ ಅನುಕಂಪದಿಂದಾಗಿ ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಸೋಲುವಂತಾಯಿತು ಎಂದು ಪಕ್ಷದ ತಾಲೂಕು ಅಧ್ಯಕ್ಷ ಕೆ.ಅರುಣಪ್ರಸಾದ್ ಹೇಳಿದರು.
 ಈಡಿಗರ ಸಂಘದ ಹೆಸರಿನಲ್ಲಿ ಹೊರಟ ಕರಪತ್ರ ಹಾಗೂ ಬೇಳೂರು, ಕಾಗೋಡು ಒಂದಾಗಿದ್ದಾರೆ ಎನ್ನುವ ಸುಳ್ಳುವದಂತಿಯೂ ಸೋಲಿಗೆ ಕಾರಣವಾಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ: ಕಾಗೋಡು ತಿಮ್ಮಪ್ಪ ಜಯಗಳಿಸುತ್ತಿದ್ದಂತೆ ಕ್ಷೇತ್ರದಾದ್ಯಂತ ಅವರ ಬೆಂಬಲಿಗರ ದಬ್ಬಾಳಿಕೆ ಹೆಚ್ಚುತ್ತಿದೆ. ಚುನಾವಣೆಗೂ ಮುನ್ನ ನನ್ನ ಮೇಲೆ ಹಲ್ಲೆ ನಡೆದಿದೆ. ಚುನಾವಣೆ ದಿನ ಜೋಗ ಕಾರ್ಗಲ್ ಪಪಂ ವ್ಯಾಪ್ತಿಯ ಅಧ್ಯಕ್ಷ ರಾಜೇಂದ್ರ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಲಾಗಿದೆ. ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ನೆಪದಲ್ಲಿ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಮನೆ ಎದುರು ಪಟಾಕಿ ಸಿಡಿಸುವುದು, ಹಿಯಾಳಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಹಕ್ಕು ಪತ್ರ ಕೊಡಿಸಬೇಕು: ಕಾಗೋಡು ತಿಮ್ಮಪ್ಪನವರು ಚುನಾವಣೆ ಪೂರ್ವ ಭರವಸೆ ನೀಡಿದಂತೆ ಬಗರ್ ಹುಕುಂ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ಹಕ್ಕುಪತ್ರ ಕೊಡಿಸಲು ಕ್ರಮ ಕೈಗೊಳ್ಳಬೇಕು. ಬೇಳೂರು ಶಾಸಕರಾಗಿದ್ದ ವೇಳೆ ಚಾಲನೆ ನೀಡಿರುವ ತುಮರಿ ಸೇತುವೆ ಹಾಗೂ ಶರಾವತಿ ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರನ್ನು ತರುವ ಯೋಜನೆ ಶೀಘ್ರಗತಿಯಲ್ಲಿ ಮುಗಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು ಮುಂದಿನ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು ಅವರನ್ನು ಅಭ್ಯರ್ಥಿಯಾಗಿ ಪಕ್ಷದಿಂದ ಕಣಕ್ಕೆ ಇಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
 ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್.ಎಲ್. ಮಂಜುನಾಥ್, ಕಲಸೆ ಚಂದ್ರಪ್ಪ, ಆರ್.ಸಿ. ಮಂಜುನಾಥ್, ಜಾಕೀರ್, ಎಂ.ಜಿ. ದೀನದಯಾಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement