ಕೋಣಂದೂರು ನ್ಯಾಷನಲ್ ಕಾಲೇಜಿಗೆ ಉತ್ತಮ ಫಲಿತಾಂಶ
ಶಿವಮೊಗ್ಗ: ಕೋಣಂದೂರಿನ ನ್ಯಾಷನಲ್ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು 2013ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಪರೀಕ್ಷೆಗೆ ಕುಳಿತ 91 ವಿದ್ಯಾರ್ಥಿಗಳ ಪೈಕಿ 82 ಮಂದಿ ಉತ್ತೀರ್ಣರಾಗಿದ್ದು, ಶೇ.90 ಫಲಿತಾಂಶ ಬಂದಿದೆ. 12 ಮಂದಿ ಡಿಸ್ಟಿಂಕ್ಷನ್, 62 ಪ್ರಥಮ ಸ್ಥಾನ, 8 ದ್ವಿತೀಯ ದರ್ಜೆಯಲ್ಲಿ ತೇರ್ಗಡೆಹೊಂದಿದ್ದಾರೆ.
ಕೆ.ಎಸ್.ಮಿಹಿರ ಶೇ.94.16 ಅಂಕ ಗಳಿಸಿ ಕಾಲೇಜಿಗೆ ಅಗ್ರಸ್ಥಾನಿಯಾಗಿದ್ದು, ಅಶ್ವತ್ಥ ಕೆ.ಎಸ್.(ಶೇ.93.33), ವಸುಧಾ ಕೆ.ವಿ. (ಶೇ.91.16), ಅರ್ಚನಾ ಎಚ್.ಆರ್.(ಶೇ.90.16), ಮಧುರಾ ಎ.ಪುರಾಣಿಕ್ (ಶೇ.89.83), ನಿವೇದಿತಾ ಜಿ.ಆರ್.(ಶೇ.89.83), ಆಶ್ರಿತಾ ಎಂ.ಜಿ.(ಶೇ.88), ಹರ್ಷಿತಾ ಕೆ.ಸಿ.(ಶೇ.87.33), ಶ್ವೇತಾ ಎಸ್.ವರ್ಣೇಕರ್ (ಶೇ.86.5), ಅನುಷಾ (ಶೇ.85.83), ವಿನಾಯಕ (ಶೇ.85.66), ವೈಷ್ಣವಿ (ಶೇ.85.5) ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದು, ಸಾಧನೆ ಮಾಡಿದ ಎಲ್ಲಾ ವಿದ್ಯಾಥಿಗಳನ್ನು ಅಭಿನಂದಿಸುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.