ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜನಸೇವೆ ಮುಂದುವರಿಸುತ್ತೇನೆ: ರುದ್ರೇಗೌಡ

Vishwanath S
Updated On : 12 May 2013, 11:57 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 11
ನಾನು ರಾಜಕೀಯದಿಂದ ದೂರವಾಗುವುದಿಲ್ಲ. ಜನಸೇವೆಯಲ್ಲಿಯೇ ಮುಂದುವರಿಯುತ್ತೇನೆ. ಚುನಾವಣೆಯಲ್ಲಿ ಸೋಲು- ಗೆಲವು ಸಾಮಾನ್ಯ. ಆದರೆ, ಕೈಕಟ್ಟಿ ಕೂರುವುದಿಲ್ಲ. ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಗೆಲವಿನ ವಿಶ್ವಾಸವಿತ್ತು. ಕೇವಲ 278 ಮತಗಳ ಅಂತರದಿಂದ ಸೋಲಾಗಿದೆ. ಈ ಸೋಲಿಗೆ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಕಾಂಗ್ರೆಸ್ ಅಲೆ ಹಾಗೂ ಚುನಾವಣಾಪೂರ್ವ ಸಮೀಕ್ಷೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಿದರು.
ಯಡಿಯೂರಪ್ಪ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಮೆಚ್ಚುಗೆ ಗಳಿಸಿರುವುದು ಹೆಚ್ಚು ಮತದಾರರು ಕೆಜೆಪಿಯತ್ತ ಒಲವು ತೋರಿಸಿದರು. ಬಿಜೆಪಿ ಮೂರನೇ ಸ್ಥಾನಕ್ಕೆ ಹೋಯಿತು ಎಂದರು.
ಪಕ್ಷವು ರಾಜ್ಯದಲ್ಲಿ ಶೇ.10ರಷ್ಟು ಮತ ಪಡೆದು ಪ್ರಾದೇಶಿಕ ಪಕ್ಷದ ಸ್ಥಾನಮಾನ ಪಡೆದಿದೆ. ಜಿಲ್ಲೆಯಲ್ಲಿ ಶೇ.29ರಷ್ಟು ಮತ ಪಡೆದಿದೆ. ಇನ್ನು ಮುಂದೆ ಜಿಲ್ಲೆಯಲ್ಲಿಯೂ ಸಹ ಪಕ್ಷ ಸಂಘಟನೆಯತ್ತ ಗಮನ ಹರಿಸುತ್ತೇನೆ ಎಂದರು.
ಈಶ್ವರಪ್ಪ ಕಾರಣ: ಯಡಿಯೂರಪ್ಪ ಅವರು ಬಿಜೆಪಿ ಬಿಡುವುದಕ್ಕೆ ಈಶ್ವರಪ್ಪರೇ ಕಾರಣ ಎಂದು ಕೆಜೆಪಿ ರಾಜ್ಯ ಕಾರ್ಯದರ್ಶಿ ಅನಂತರಾಮಯ್ಯ ಟೀಕಿಸಿದರು.
 ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಎಲ್ಲಾ ಭಿನ್ನಮತೀಯ ಚಟುವಟಿಕೆಗಳಿಗೆ ಈಶ್ವರಪ್ಪರೇ ಮೂಲ ಕಾರಣ. ಪ್ರತಿ ಸಾರಿ ಅವರು ಯಡಿಯೂರಪ್ಪರ ಕಾಲೆಳೆಯುವ ಪ್ರಯತ್ನ ಮಾಡಿದರು. ಕೆಜೆಪಿ ಪಕ್ಷ ಉದಯವಾಗಲು ಕಾಂಗ್ರೆಸ್ ಕಾರಣವಲ್ಲ, ಈಶ್ವರಪ್ಪರೇ ಕಾರಣ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ್, ನಗರಸಭೆ ಸದಸ್ಯರಾದ ಐಡಿಯಲ್ ಗೋಪಿ, ಮಾಲತೇಶ್, ಸತೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement