ಮಕ್ಕಳ ರಂಗನಮನ ಮಳೆಬಿಲ್ಲು
ತೀರ್ಥಹಳ್ಳಿ: ಸಾಗರದ ಸ್ಪಂದನ ರಂಗತಂಡವು ಕುವೆಂಪು ಹುಟ್ಟೂರು ಕುಪ್ಪಳಿಯಲ್ಲಿ ಆಯೋಜಿಸಿರುವ ರಸಋಷಿಗೆ ಮಕ್ಕಳ ರಂಗನಮನ ಮಳೆಬಿಲ್ಲು-1 ರಂಗಶಿಬಿರವನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಮಕ್ಕಳಿಗೆ ಕತೆ ಹೇಳುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿರುವ ಈ ಶಿಬಿರದಲ್ಲಿ ಅವರು, ಮಕ್ಕಳು ಕತೆಗಳನ್ನು ಕೇಳುವುದರಿಂದ ಕಲ್ಪನಾಶಕ್ತಿ ವಿಸ್ತರಿಸಿಕೊಳ್ಳಬಹುದು ಎಂದರು.
ಶಿಬಿರದ ನಿರ್ದೇಶಕಿ ಪ್ರತಿಭಾ ರಾಘವೇಂದ್ರ ಉಪಸ್ಥಿತರಿದ್ದರು. ಸ್ಪಂದನ ತಂಡದ ವಿಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕುಪ್ಪಳಿಯಲ್ಲಿ 10 ದಿನಗಳ ಕಾಲ ನಡೆಯುವ ಈ ರಂಗ ಶಿಬಿರದಲ್ಲಿ ಮಕ್ಕಳಿಗೆ ರಂಗ ತರಬೇತಿಯ ಜತೆಗೆ ಪರಿಸರ, ಕುವೆಂಪುರವರ ಸಮಗ್ರ ಪರಿಚಯ, ಮಕ್ಕಳಿಗೆ ಚಾರಣ ಇತ್ಯಾ ಕಾರ್ಯಕ್ರಮಗಳಿರುತ್ತವೆ. ಮೇ 19ರಂದು ಮುಕ್ತಾಯ ಸಮಾರಂಭದಲ್ಲಿ ಕುವೆಂಪು ಕೃತಿಯಾಧಾರಿತ ನಾಟಕ ಪ್ರದರ್ಶನವಿರುತ್ತದೆ.