ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೌಲ್ಯಾಧಾರಿತ ರಾಜಕಾರಣಕ್ಕೆ ನಾಂದಿ

Vishwanath S
Updated On : 12 May 2013, 11:57 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 11
ವಿಧಾನಸಭಾ ಚುನಾವಣೆಯಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ನಾಂದಿ ಹಾಡುವಲ್ಲಿ ನಮ್ಮ ಪಕ್ಷ ಯಶಸ್ವಿಯಾಗಿದೆ ಎಂದು ಲೋಕಸತ್ತಾ ಪಕ್ಷದ ವಕ್ತಾರ ಆನಂದ ಯಾದವಾಡ ತಿಳಿಸಿದ್ದಾರೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕಾರಣ ಭ್ರಷ್ಟಾಚಾರದಿಂದ ಕಲುಷಿತವಾಗಿದೆ. ಇಂತಹ ಸಂದರ್ಭದಲ್ಲಿ ಲೋಕಸತ್ತಾ ಪಕ್ಷ ರಾಜಕಾರಣದಲ್ಲಿ ಮೌಲ್ಯವನ್ನು ತುಂಬುವ ಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ವಿಯಾಗುತ್ತಿದೆ ಎಂದು ಹೇಳಿದರು.
 ಪಕ್ಷದ 24 ಅಭ್ಯರ್ಥಿಗಳು ಚುನಾವಣೆಯಲ್ಲಿ ಮಿತಿಮೀರಿ ಖರ್ಚು ಮಾಡದೆ, ಚುನಾವಣಾ ಆಯೋಗ ವಿಧಿಸಿದ್ದ ಮಿತಿಯಲ್ಲೇ ಚುನಾವಣೆ ಮಾಡಿದೆ. 24 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಶೇ.6ರಷ್ಟು ಮತ ಪಡೆದು 3ನೇ ಸ್ಥಾನ ಪಡೆದುಕೊಂಡಿದೆ. ಜನತೆಯೂ ಸಹ ಮೌಲ್ಯಾಧಾರಿತ ಹಾಗೂ ನೈತಿಕ ರಾಜಕಾರಣ ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ವಿವರಿಸಿದರು.
 ಯುವ ಜನತೆ ಹೆಚ್ಚುಹೆಚ್ಚಾಗಿ ರಾಜಕಾರಣಕ್ಕೆ ಬಂದಾಗ ಈ ಕ್ಷೇತ್ರ ಖಂಡಿತವಾಗಿಯೂ ಪರಿಶುದ್ಧಗೊಳ್ಳಲಿದೆ ಎಂಬ ಆಶಯ ಪಕ್ಷಕ್ಕಿದೆ ಎಂದರು.
 ಲೋಕಸತ್ತಾ ಪಕ್ಷದಿಂದ ಬೆಂಗಳೂರು ಬಿಟಿಎಂ ಲೇಔಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿ ಕೃಷ್ಣಾರೆಡ್ಡಿ ಮಾತನಾಡಿ, ಲೋಕಸತ್ತಾ ಪಕ್ಷಕ್ಕೆ ಮತದಾರರು ಈ ಮಟ್ಟದಲ್ಲಿ ಸ್ಪಂದಿಸಲಿದ್ದಾರೆಂಬ ನಿರೀಕ್ಷೆ ಇರಲಿಲ್ಲ. ಪಕ್ಷದ ಅಭ್ಯರ್ಥಿಗಳಿಗೆ ಹಾಕಿರುವ ಒಂದೊಂದು ಮತವೂ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ವಿರುದ್ಧ ಬಿದ್ದಿರುವ ಮತ ಎಂದು ಬಣ್ಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement