ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಚೆ ಕಚೇರಿಯಲ್ಲಿಯೂ ಭರ್ಜರಿ ಚಿನ್ನ ಮಾರಾಟ

Lingaraj Badiger
Updated On : 15 May 2013, 10:54 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 14
ಅಕ್ಷಯ ತೃತೀಯ ಅಂಗವಾಗಿ ನಗರದ ಎಲ್ಲಾ ವಸ್ತ್ರಾಭರಣಗಳ ಅಂಗಡಿಗಳಲ್ಲಿ ಕಿಕ್ಕಿರಿದು ಜನ ಸೇರುವುದು ಸಾಮಾನ್ಯ ಸಂಗತಿ. ಆದರೆ, ಅಂಚೆ ಕಚೇರಿಯಲ್ಲಿಯೂ ಚಿನ್ನಾಭರಣ ಖರೀದಿ ಮಾಡಲು ಜನ ಸಾಲುಗಟ್ಟಿ ನಿಂತಿದ್ದರೆಂದರೆ ಅಚ್ಚರಿ ಏಕೆ, ಇದು ಸತ್ಯ.
ಭಾರತೀಯರ ಸಂಪ್ರದಾಯದಲ್ಲಿ ವರ್ಷಕ್ಕೊಮ್ಮೆ ಬರುವ ಅಕ್ಷಯ ತೃತೀಯ ದಿನ ಬಹಳ ಶುಭದಿನ. ಅಂದು ವಸ್ತ್ರಾಭರಣ ಹಾಗೂ ಮತ್ತಿತರ ವಿಶೇಷ ವಸ್ತುಗಳನ್ನು ಖರೀದಿ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ.
ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಶಿವಮೊಗ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಅಕ್ಷಯ ತೃತಿಯ ಅಂಗವಾಗಿ ಸೋಮವಾರದಿಂದ ಬುಧವಾರದವರೆಗೆ ಸಾರ್ವಜನಿಕರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಪರಿಶುದ್ಧ ಬಂಗಾರವನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಅಂಚೆ ಇಲಾಖೆ ಹೊಂದಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಅಂಚೆ ಕಚೇರಿಯಲ್ಲಿ ಸುಮಾರು 395 ಗ್ರಾಂ ಚಿನ್ನದ ನಾಣ್ಯಗಳು ಮಾರಾಟವಾಗಿವೆ.  1 ಗ್ರಾಂನ 69, 5 ಗ್ರಾಂನ 14, 8 ಗ್ರಾಂನ 7, 10 ಗ್ರಾಂನ 23, 20 ಗ್ರಾಂನ 2 ಹಾಗೂ 50 ಗ್ರಾಂನ 1 ನಾಣ್ಯಗಳು ಮಾರಾಟವಾಗಿದ್ದು, ಸುಮಾರು 12.64 ಲಕ್ಷ ರುಪಾಯಿ ವಹಿವಾಟು ನಡೆದಿದೆ.
ವಿಶೇಷವೆಂದರೆ ಕಳೆದ ಬಾರಿಗಿಂತ ಈ ಬಾರಿ ಶೇ.50 ರಷ್ಟು ಹೆಚ್ಚು ಚಿನ್ನದ ನಾಣ್ಯಗಳು ಮಾರಾಟವಾಗಿವೆ. ಇದು ಬುಧವಾರವು ಮುಂದುವರೆಯುವುದರಿಂದ ಮತ್ತಷ್ಟು ನಾಣ್ಯಗಳು ಮಾರಾಟವಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು.
ಇಲಾಖೆ ವರ್ಲ್ಡ್‌ಗೋಲ್ಡ್ ಕೌನ್ಸಿಲ್ ಮುಖಾಂತರ ಶೇ.99.99ರಷ್ಟು ಪರಿಶುದ್ಧ ಬಂಗಾರದ ನಾಣ್ಯಗಳನ್ನು ಸ್ವಿಸ್ ಅಂತರಾಷ್ಟ್ರೀಯ ಗ್ಯಾರೆಂಟಿಯ ಆಧಾರದ ಮೇಲೆ ಪ್ರತಿ ನಾಣ್ಯಗಳ ಮೇಲೆ ಅಂತರಾಷ್ಟ್ರೀಯ ಪ್ರಮಾಣ ಪತ್ರವಾದ ಅಸೆ ಸರ್ಟಿಫೀಕೇಟ್ ನಂ. ಮುದ್ರಿತವಾಗಿರುತ್ತದೆ. ಅದರಿಂದಲೇ ಹೊರಗಿನ ಚಿನಿವಾರ ಪೇಟೆಯ ಬೆಲೆಗಿಂತ ಶೇಕಡಾ ಪ್ರಮಾಣದಲ್ಲಿ ಹೆಚ್ಚಿದ್ದರೂ (ಪ್ರತಿ ಗ್ರಾಂಗೆ 3.200) ಜನ ಅಂಚೆ ಕಚೇರಿಯಲ್ಲಿ ಹೆಚ್ಚು ನಾಣ್ಯಗಳನ್ನು ಕೊಂಡೂಯ್ಯುತ್ತಿರುವುದು ವಿಶೇಷ.
ಅಂಚೆ ಇಲಾಖೆ ಮೂಲಕ ಖರೀದಿಸುವ ಬಂಗಾರದ ನಾಣ್ಯಗಳಿಗೆ ಶೇ.7ರಷ್ಟು ರಿಯಾಯಿತಿ ಇರುತ್ತದೆ. ಈ ನಾಣ್ಯಗಳನ್ನು ನಕಲು ಮಾಡಲಾಗದ ಟ್ಯಾಂಪರ್ ಪ್ರೂಫ್ ಕವರ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲದೇ, ನಾಣ್ಯಗಳ ಮಾರಾಟ ನಡೆಯುತ್ತದೆ ಎನ್ನುತ್ತಾರೆ ಅಂಚೆ ಇಲಾಖೆ ಅಧೀಕ್ಷಕ ಶಶಿಧರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement